ಬೆಳ್ತಂಗಡಿ : ಮಾಳ ಅಂಚೆ ಕಚೇರಿಯಲ್ಲಾದ ಕರ್ತವ್ಯ ಲೋಪ ಹಾಗೂ ನಿರ್ಲಕ್ಷತನದಿಂದ ನೊಂದ ಬೆಳ್ತಂಗಡಿ ತಾಲೂಕಿನ ನಾಗರಿಕರೊಬ್ಬರು ಎ. 12 ರಂದು ಪುತ್ತೂರಿನಲ್ಲಿರುವ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯ ಎದುರು ಧರಣಿ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ.
ತಾಲೂಕಿನ ಒಡಿಲ್ನಾಳ ಗ್ರಾಮದ ತಂಗೋಯಿ ಮನೆಯ ಹರಿಪ್ರಸಾದ ಇರ್ವತ್ತಾಯ ಅವರು ಅಂಚೆ ಇಲಾಖೆಯಿಂದ ತನಗಾದ ಮೊಸವನ್ನು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಸಮೇತ ವಿವರ ನೀಡಿದರು.
2014 ನ. 26 ರಂದು ಕಾರ್ಕಳ ತಾಲೂಕು ಮಾಳಗ್ರಾಮ ಪಂಚಾಯತ್ ಸಾರ್ವಜನಿಕ ಮಾಹಿತಿ ಅಧಿಕಾರಿಯವರಿಗೆ ಅಂದರೆ ಪಂಚಾಯತ್ ಕಾರ್ಯದರ್ಶಿಯವರಿಗೆ ನೋಂದಾಯಿತ ಅಂಚೆಯನ್ನು ರವಾನಿಸಿದ್ದು ಅದು ನ. 29 ರಂದುತಲುಪಿದೆ. ಆದರೆ ಡಿ. 1 ರಂದು ಸ್ವೀಕರಿಸಿರುವುದಾಗಿ ಕಾರ್ಯದರ್ಶಿಯವರು ಸಹಿ ಹಾಗೂ ಮೊಹರು ಹಾಕಿರುವುದು ಗೊತ್ತಾಗಿದೆ.
ಈ ಬಗ್ಗೆ ಸ್ವೀಕೃತಿ ಪತ್ರವೂ ಬಂದಿರುತ್ತದೆ. ಆದರೆ ಪಂಚಾಯತ್ ಕಾರ್ಯದರ್ಶಿ ನ. 27 ರಂದು ಕಚೇರಿಯಲ್ಲಿರುವುದು ಧೃಢಪಟ್ಟಿದೆ. ಅಂಚೆ ಕಚೇರಿ ಹಾಗೂ ಪಂಚಾಯತ್ ಕಚೇರಿ ಅಕ್ಕಪಕ್ಕದಲ್ಲಿದ್ದರೂ ರಿಜಿಸ್ಟರ್ಡ್ ಅಂಚೆ ಬಟವಾಡೆಯಾಗಲು 5 ದಿನ ತಗುಲಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ ಎಂದರು.
ಇನ್ನೊಂದೆಡೆ 2015 ಜೂ. 24 ರಂದು ಮಾಳ ಗ್ರಾ.ಪಂ.ಗೆ ನೋಂದಾಯಿಸಿ ಅಂಚೆ ಮಾಡಿದ ಪತ್ರದ ಜೊತೆಗಿದ್ದ ಸ್ವೀಕೃತಿ ಪತ್ರದಲ್ಲಿನ ದಿನಾಂಕವನ್ನು ತಿದ್ದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಮಾಳ ಅಂಚೆ ಕಚೇರಿಯ ನೌಕರರನ್ನು ಅಲ್ಲಿನ ಗ್ರಾಮ ಪಂಚಾಯತ್ ಅಧಿಕಾರಗಳನ್ನು ಬಳಸಿಕೊಂಡಿದ್ದಾರೆ.
ಅದ್ದರಿಂದ ಅಂಚೆ ಕಚೇರಿಯಲ್ಲಾದ ಕರ್ತವ್ಯ ಲೋಪ, ನಿರ್ಲಕ್ಷ, ದುರ್ಬಳಕೆ, ದುರುಪಯೋಗದಂತಹ ವಿಚಾರವನ್ನು ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಿ ನ್ಯಾಯಒದಗಿಸಬೇಕುಇಲ್ಲವಾದಲ್ಲಿ ಎ. 12 ರಂದುಏಕಾಂಗಿಯಾಗಿ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಎದುರು ಧರಣಿಕೂರುತ್ತೇನೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.