ಕಾರ್ಕಳ: ತಾಯಿ ತನ್ನ ಮಕ್ಕಳಿಗೆ ಗಂಜಿಯಲ್ಲಿ ಕಾಣದಂತೆ ತುಪ್ಪ ಬೆರೆಸಿ ನೀಡುವಂತೆ ದೇವರು ಭಕ್ತನಿಗೆ ಒಳಗಿಂದೊಳಗೆ ಅನುಗ್ರಹಿಸುತ್ತಾರೆ ಎಂದು ಪಲಿಮಾರು ಮಠಾಧೀಶ ವಿದ್ಯಾಶತೀರ್ಥ ಸ್ವಾಮೀಜಿ ಹೇಳಿದರು.
ಅವರು ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಡಿ.ಮರಿಯಣ್ಣ ಭಟ್ ಸ್ಮರಣಾರ್ಥ ಅವರ ಪತ್ನಿ ಸರಸ್ವತಿ ಅಮ್ಮ ಮತ್ತು ಮಕ್ಕಳು ನೀಡಿದ ರಜತ ಛತ್ರ, ವಜ್ರಾಭರಣ ಸಮರ್ಪಣೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಮಗಳು ತಾಯಿಗೆ ಪ್ರೀತಿಯಿಂದ ಉಡುಗೊರೆ ನೀಡಿದಾಗ ಖುಷಿ ಆಗುವಂತೆ ಊರಿನವರೇ ನಮ್ಮೂರ ದೇವಿಗೆ ಭಕ್ತಿಯಿಂದ ಸಮರ್ಪಿಸಿದರೆ ದೇವರಿಗೆ ಪ್ರಿಯವಾಗುತ್ತದೆ. ಸರ್ವವ್ಯಾಪಿಯಾದ ದೇವರಿಗೆ ನಮ್ಮ ಉಡುಗೊರೆಯಿಂದ ಏನೂ ಆಗಬೇಕಾಗಿಲ್ಲ. ಆದರೆ ನಮ್ಮ ಶಕ್ತ್ಯಾನುಸಾರ ಸಮರ್ಪಿಸುತ್ತೇವೆ ಎಂದರು.
ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ದುರ್ಗೆಯ ಆರಾಧಾನೆಯಿಂದ ತಮೋಗುಣ ನಶಿಸಿ, ಜ್ಞಾನ ಪ್ರಾಪ್ತಿಯಾಗುತ್ತದೆ ಎಂದರು. ಅರ್ಚಕ, ವೇದಮೂರ್ತಿ ಶಂಕರನಾರಾಯಣ ಭಟ್, ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮಾತನಾಡಿದರು. ಆಡಳಿತ ಮೊಕ್ತೇಸರ ರತ್ನರಾಜ ಮುದ್ಯ ಅಧ್ಯಕ್ಷತೆ ವಹಿಸಿದ್ದರು. ಲೀಲಾವತಿ ಆರ್.ಮುದ್ಯ, ಚಿತ್ರಾ ಭಟ್ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆಮ್ಮಣ್ಣು ಎ.ಲಕ್ಷ್ಮೀಕಾಂತ್ ಭಟ್- ರಾಜೇಶ್ವರಿ ದಂಪತಿ, ಕರ್ನಾಟಕ ಯುವರತ್ನ ಪ್ರಶಸ್ತಿ ವಿಜೇತ ಶರತ್ ಕಾನಂಗಿ, ತೆಲಿಕೆದ ತೆನಾಲಿ ಖ್ಯಾತಿಯ ಸುನಿಲ್ ನೆಲ್ಲಿಗುಡ್ಡೆ ಅವರನ್ನು ಸನ್ಮಾನಿಸಲಾಯಿತು.
ಲಕ್ಷ್ಮೀಕಾಂತ್ ಭಟ್ ಹಾಗೂ ಮಂಚಿ ಸದಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಮೊಯ್ಲಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.