ಮನಿಶಾ ಮಹಾಜನ್, ವಯಸ್ಸು 26. ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಟೊಂಡ ಗ್ರಾಮದಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಹಣ ಸಂಪಾದನೆಗಾಗಿಯೇ ವೈದ್ಯರಾಗಿರುವ ಮಂದಿಯ ನಡುವೆ ಇವರು ಪ್ರತ್ಯೇಕವಾಗಿ ನಿಲ್ಲುತ್ತಾರೆ.
ತಾನು ವೈದ್ಯ ವೃತ್ತಿ ಮಾಡುತ್ತಿರುವ ಗ್ರಾಮದಲ್ಲಿ ಸರ್ಕಾರದಿಂದ ನಯಾಪೈಸೆಯನ್ನೂ ಪಡೆಯದೆ ಇವರು ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಅದು ಕೂಡ ಸಂಪೂರ್ಣ ಡಿಜಿಟಲೀಕರಣಗೊಂಡ ಆರೋಗ್ಯ ಕೇಂದ್ರ. ಇಲ್ಲಿ ದಿನದ 24 ಗಂಟೆಯೂ ವೈಫೈ ಕನೆಕ್ಷನ್ ಇದೆ, ಆಧುನಿಕ ವೈದ್ಯಕೀಯ ಪರಿಕರಗಳಿವೆ.
ಆಕೆ ಸ್ಥಾಪಿಸಿದ ಆರೋಗ್ಯ ಕೇಂದ್ರದಿಂದ ಜಿಲ್ಲೆಯ 13 ಹಳ್ಳಿಗಳ ಜನರು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ, ಇಲ್ಲಿ ಅತ್ಯಾಧುನಿಕ ಡಿಜಿಟಲ್ ಪಲ್ಸ್ ಒಕ್ಸಿಮೀಟರ್, ಗ್ಲೂಕೋಮೀಟರ್, ರಕ್ತದೊತ್ತಡ ಪರೀಕ್ಷಿಸುವ ಅಪ್ಪೆರಟಸ್, ಥರ್ಮೋಮೀಟರ್, ನೆಬುಲಿಸರ್, ಡಿಜಿಟಲ್ ವೇಟ್ ಮೆಶಿನ್ ಮುಂತಾದುವುಗಳು ಇವೆ.
ಈ ಆರೋಗ್ಯ ಕೇಂದ್ರ ಸ್ಥಾಪನೆಗೆ ಮನಿಶಾ 20 ಸಾವಿರ ರೂಪಾಯಿಗಳನ್ನು ತಮ್ಮ ಕೈಯಿಂದ ಹಾಕಿದ್ದಾರೆ, ಸ್ಟಾಫ್ಗಳಿಂದ 19 ಸಾವಿರ ಸಂಗ್ರಹ ಮಾಡಿದ್ದಾರೆ, ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು 20 ಸಾವಿರ ನೀಡಿದ್ದಾರೆ, ಸ್ಥಳೀಯ ಶಾಸಕರು 5೦ ಸಾವಿರ ನೀಡಿದ್ದಾರೆ. ಉಳಿದ ಹಣವನ್ನು ಗ್ರಾಮಸ್ಥರು ಸಂಗ್ರಹಿಸಿ ನೀಡಿದ್ದಾರೆ.
ಪ್ರಸ್ತುತ ಈ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಸಂಖ್ಯೆ ಈಗ ಶೇ.30-40ರಷ್ಟು ಏರಿಕೆಯಾಗಿದೆ. ಆದೇನೆಯಿರಲಿ ದೊಡ್ಡ ಧೈರ್ಯವನ್ನು ಮಾಡಿ ಆರೋಗ್ಯ ಕೇಂದ್ರ ಸ್ಥಾಪಿಸಿದ ಮನಿಶಾ ನಿಜಕ್ಕೂ ವೈದ್ಯ ವೃತ್ತಿಗೆ ಹೊಸ ಅರ್ಥ ನೀಡಿದ್ದಾರೆ. ಗ್ರಾಮಸ್ಥರ ಪಾಲಿಗೆ ಆರೋಗ್ಯ ದಾತೆ ಎನಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.