ಲಕ್ನೋ : ನೇತಾಜಿ ಸುಭಾಸ್ ಚಂದ್ರ ಬೋಸ್ ಅವರೇ ಗುಮ್ನಾಮಿ ಬಾಬಾ ಆಗಿದ್ದರೇ, ಎಂಬ ಪ್ರಶ್ನೆಗೆ ಉತ್ತರವು ಇನ್ನು ಕೆಲವೇ ದಿನಗಳಲ್ಲಿ ದೊರಕುವ ಸಾಧ್ಯತೆಗಳಿವೆ.
ಗುಮ್ನಾಮಿ ಬಾಬಾ ಅವರ ಇನ್ನೊಂದು ಪಟ್ಟಿಗೆಯನ್ನು ತೆರೆದಿದ್ದು ಅದರಲ್ಲಿ ಸುಭಾಸ್ ಚಂದ್ರ ಬೋಸ್ ಸೇರಿದಂತೆ ಇನ್ನುಳಿದ 22 ಮಂದಿ ಅವರ ಪರಿವಾರದ ಸದಸ್ಯರೊಂದಿಗೆ ತೆಗಿದಿರುವ ಅತ್ಯಪರುಪದ ಫೋಟೋ ದೊರೆತ್ತಿದೆ. ಗುಮ್ನಾಮಿ ಬಾಬಾ ಅವರು ಫೈಜಾಬಾದ್ನಲ್ಲಿರುವ ರಾಮ ಭವನದಲ್ಲಿ ತಮ್ಮ ಬದುಕಿನ ಕೊನೆಯ ೩ ವರ್ಷಗಳನ್ನು (1982 ರಿಂದ 1985) ಕಳೆದಿದ್ದರು. ಇದನ್ನು ರಾಮ್ ಭವನ್ನ ಮಾಲಕ ಶಕ್ತಿಸಿಂಗ್ ಕೂಡಾ ಒಪ್ಪಿಕೊಂಡಿದ್ದಾರೆ.
ಇದನ್ನು ಸುಭಾಸ್ ಚಂದ್ರ ಬೋಸ್ ಅವರ ಕೌಟುಂಬಿ ಭಾವಚಿತ್ರದಲ್ಲಿ ಅವರ ಸೋದರರು ತಂದೆ ತಾಯಿ ಮತ್ತು ಸೋದರಿರಿಯರು ಮತ್ತು ಇನ್ನುಳಿದ ಪರಿವಾರದ ಸದಸ್ಯರೊಂದಿಗೆ ಇದ್ದಾರೆ ಎಂದು ಹೇಳಲಾಗಿದೆ. ಇವರನ್ನು ಸುರೇಶ್ ಚಂದ್ರ ಬೋಸ್ ಅವರ ಪುತ್ರಿ ರಾಮ ಭವನಕ್ಕೆ ಭೇಟಿ ನೀಡಿ ಗುರಿತಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಸ್ ಸಿ ಬೋಸ್ ರಾಷ್ಟ್ರೀಯ ವಿಚಾರ ಕೇಂದ್ರದ ಮುಖ್ಯಸ್ಥರಾಗಿರುವ ಶಕ್ತಿ ಸಿಂಗ್ ಅವರ ಪ್ರಕಾರ ಗುಮ್ನಾಮಿ ಬಾಬಾ ಅವರು ಉಳಿದವರಂತೆ ಕೇವಲ ಒಬ್ಬ ಸಾಮಾನ್ಯ ಸಾಧು ಅಥವಾ ಸಂತನಾಗಿರಲಿಲ್ಲ. ಅವರೊಬ್ಬ ಅತ್ಯುತ್ತಮ ವ್ಯಕ್ತಿಯಾಗಿದ್ದರು ಎಂದು ಅವರು ಹೇಳಿದ್ದಾರೆ.
ಕಳೆದ ಬಾರಿ ತೆರದ ಪಟ್ಟಿಗೆಯಲ್ಲಿ ಎರಡನೇ ಮಹಾಯುದ್ಧದ ಕಾಲಘಟ್ಟದಲ್ಲಿ ಜರ್ಮನಿಯಿಂದ ಉತ್ಪಾದಿತವಾದ ಒಂದು ಬೈನಾಕ್ಯುಲಾರ್ ಮತ್ತು ಬ್ರಿಟಿಷರ ಕಾಲದ ಎಂಪಾಯರ್ ಕೊರೋನಾ ಕ್ಲಾಸಿಕ್ ಪೋರ್ಟಬಲ್ ಟೈಪರೈಟರ್ ಮತ್ತು ಹಳೇಕಾಲದ ಪೋರ್ಸೆಲಿನ್ ಟೀ ಸೆಟ್ ಹಾಗೂ ಅನೇಕ ಅಮೂಲ್ಯ ಪುಸ್ತಕಗಳು ಕಂಡು ಬಂದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.