ನವದೆಹಲಿ: ವಿಜಯ್ ಮಲ್ಯ ಅವರು ಖಾಸಗಿ ಪತ್ರಿಕೆ ’ದ ಸಂಡೇ ಗಾರ್ಡಿಯನ್’ಗೆ ಸಂದರ್ಶನ ನೀಡಲು ನಿರಾಕರಿಸಿದ್ದಾರೆ. ಅಲ್ಲದೇ ಭಾರತಕ್ಕೆ ಹಿಂದಿರುಗಲು ಇದು ಸೂಕ್ತ ಸಮಯವಲ್ಲ ಎಂದು ಪತ್ರಿಕೆ ಪ್ರಕಟಿಸಿದನ್ನು ಅಲ್ಲಗಳೆದಿದ್ದಾರೆ.
ಮಾಧ್ಯಮಗಳ ವರದಿ ನೋಡಿ ಆಶ್ಚರ್ಯವಾಗಿದೆ. ನಾನು ಯಾವುದೇ ಮಾಧ್ಯಮಕ್ಕೆ ಸಂದರ್ಶನ ನೀಡಿಲ್ಲ. ಯಾವುದೇ ಪರಿಶೀಲನೆ ನಡೆಸದೇ ವರದಿ ಮಾಡಲಾಗಿದೆ ಎಂದು ಅವರು ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮಲ್ಯ ಅವರು ತಮ್ಮ ವೈಯಕ್ತಿಕ ಇಮೇಲ್ ಮೂಲಕ ಮಾ.೧೨ರಂದು ನಮ್ಮ ಪ್ರಶ್ನಾವಳಿಗಳಿಗೆ ಪ್ರತಿಕ್ರಿಯಿಸಿದ್ದರು ಎಂದು ಯು.ಕೆ.ಯ ’ದ ಗಾರ್ಡಿಯನ್’ ಪತ್ರಿಕೆ ಪ್ರಕಟಿಸಿತ್ತು. ಸದ್ಯ ಮಲ್ಯ ಅವರು ಯಾವುದೇ ಮಾಧ್ಯಮಗಳಿಂದ ದೂರ ಸರಿಯಲು ನಿರ್ಧರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.