ಬೆಳ್ತಂಗಡಿ : ಹಲವು ಪ್ರಶಸ್ತಿಗಳು ದೊರಕಿರುವ ಲಾಯಿಲ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವತಲೆದೋರಿದ್ದು, ಜನ ಕುಡಿಯುವ ನೀರಿಗಾಗಿ ನದಿಯ ಗಲೀಜು ನೀರನ್ನು ಅವಲಂಬಿಸಬೇಕಾಗಿರುವುದು ನಮ್ಮ ದುರಂತ. ಪರಿಸ್ಥಿತಿ ಹೀಗೆ ಮುಂದುವರಿದರೆ ಪಂಚಾಯತ್ ಎದುರು ಉಪವಾಸ ಸತ್ಯಾಗ್ರಹ ನಡೆಸಬೇಕಾದೀತೆಂದು ಡಿ.ಎಸ್.ಎಸ್. (ಅಂಬೇಡ್ಕರ್ ವಾದ)ದತಾಲೂಕು ಮುಖಂಡ ನಾಗರಾಜ್ಎಸ್. ಲಾಯಿಲ ಎಚ್ಚರಿಸಿದರು.
ಅವರು ಲಾಯಿಲ ಗ್ರಾಮ ಪಂಚಾಯತ್ ಎದುರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿದ್ದರೂ ಕೂಡಾ ಆಡಳಿತ ವರ್ಗಕಣ್ಣು ಮುಚ್ಚಿ ಕುರುಡರಂತೆ ವರ್ತಿಸುತ್ತಿದೆ. ರಸ್ತೆ, ಕುಡಿಯುವ ನೀರು, ಚರಂಡಿ, ಶೌಚಾಲಯ ಮೊದಲಾದ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿರುವ ಪಂಚಾಯತ್ ಆಡಳಿತಕ್ಕೆ ಪ್ರಶಸ್ತಿಗಳು ಲಭಿಸಿರುವುದು ಸಂಶಯಾಸ್ಪದವಾಗಿದೆ ಎಂದು ಆರೋಪಿಸಿದರು. ಅಂಗನವಾಡಿಕೇಂದ್ರ, ಅಂಬೇಡ್ಕರ ಭವನ ಕುಸಿಯುವ ಹಂತದಲ್ಲಿದ್ದು ಮುಂದಿನ ಏಪ್ರಿಲ್ 14 ರೊಳಗೆ ಈ ಬಗ್ಗೆ ಕ್ರಮಕೈಕೊಳ್ಳದಿದ್ದಲ್ಲಿ ಪಂಚಾಯತ್ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಸಭೆಯನ್ನು ಉದ್ದೇಶಿಸಿ ಸಾಮಾಜಿಕ ಹೋರಾಟಗಾರ ಬಿ. ದಾಮೋಧರ್ ಭಟ್, ಬೈರ ಸಮಾಜ ಸೇವಾ ಸಂಘದ ಅಧ್ಯಕ್ಷ ಉದಯಕುಮಾರ್, ಕಾರ್ಯದರ್ಶಿ ಸುರೇಶ್ ವಿ.ಎಸ್. ಗ್ರಾಮಸ್ಥರಾದ ಸೈಯದ್ ಅಲಿ ಮಾತನಾಡಿದರು. ಈ ಸಂದರ್ಭದಲ್ಲಿ ಹೈದರ್ ಪುತ್ರಬೈಲ್, ಡಿ.ಎಸ್.ಎಸ್. ಅಂಬೇಡ್ಕರ್ ವಾದ ಸಂಚಾಲಕ ಶ್ರೀನಿವಾಸ್ಕೆ.ಎಸ್., ಸತೀಶಎಲ್. ನಿನ್ನಿಕಲ್ಲು, ಅಶ್ರಫ್ಅಂಬೇಡ್ಕರ್ ನಗರ, ಸಂಕಪ್ಪ ಪುತ್ರಬೈಲು, ಮೋನಪ್ಪ ಬೆರ್ಕೆ, ವಸಂತಕಾವಟೆ, ಪುಟ್ಟಪ್ಪ ಪುತ್ರಬೈಲ್, ಉದಯ ಗೋಳಿಯಂಗಡಿ, ದಯಾನಂದ ಪುತ್ರಬೈಲು, ರಫೀಕ್ ಅಂಬೇಡ್ಕರ್ ನಗರ ಉಪಸ್ಥಿತರಿದ್ದರು.
ಪ್ರತಿಭಟನಾಕಾರರು ಮನವಿಯನ್ನು ಪಂಚಾಯತ್ ಆಡಳಿತ ವರ್ಗ ಸ್ವೀಕರಿಸಿತು. ಈ ಸಂದರ್ಭ ಮಾತನಾಡಿದ ಅಧ್ಯಕ್ಷೆ ವೀಣಾರಾವ್ ತಮ್ಮ ಬೇಡಿಕೆಗಳನ್ನು ಅನುದಾನದ ಆಧಾರದಲ್ಲಿ ಹಂತಹಂತವಾಗಿ ಈಡೇರಿಸಲಾಗುವುದು ಎಂದರು. ಈ ಸಂದರ್ಭ ತಾಲೂಕು ಪಂಚಾಯತ್ ಮೇನೇಜರ್ ಗಣೇಶ್ ಪೂಜಾರಿ, ಲಾಯಿಲ ಪಂಚಾಯತ್ ಪಿ.ಡಿ.ಓ. ಪ್ರಕಾಶ್ ಶೆಟ್ಟಿ ನೊಚ್ಚ, ಉಪಾಧ್ಯಕ ಗಿರೀಶ್ಡೋಂಗ್ರೆ, ತಾ.ಪಂ. ಸದಸ್ಯ ಸುಧಾಕರ ಬಿ.ಎಲ್. ಸೇರಿದಂತೆ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.