ನ್ಯೂಯಾರ್ಕ್: ಸುಮಾರು 8ನೇ ಶತಮಾನದಷ್ಟು ಹಳೆಯ ಭಾರತದ ಎರಡು ಪ್ರತಿಮೆಗಳನ್ನು ವಿಶ್ವದ ಅತಿ ದೊಡ್ಡ ಹರಾಜು ಗೃಹ, ಅಮೇರಿಕದ ಕ್ರಿಸ್ಟೀಸ್ನಿಂದ ವಶಪಡಿಸಲಾಗಿದೆ.
ಮರಳುಕಲ್ಲಿನಿಂದ ತಯಾರಿಸಲಾಗಿದ್ದ ಈ ಕಲಾಕೃತಿಗಳನ್ನು ಭಾರತ ಸರ್ಕಾರ ಮತ್ತು ಇಂಟರ್ಪೋಲ್ ನೆರವಿನೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ತನಿಖೆ ಮೂಲಕ ವಶಪಡಿಸಿಕೊಳ್ಳಲಾಗಿದೆ. ಈ ಕಲಾಕೃತಿಗಳನ್ನು ಕ್ರಿಸ್ಟೀಸ್ ಹರಾಜು ಗೃಹದಲ್ಲಿ ಮಾ.15ರಂದು ನಡೆಯಲಿರುವ ಏಷ್ಯಾ ವೀಕ್ ನ್ಯೂಯಾರ್ಕ್ ಫೆಸ್ಟಿವಿಟೀಸ್ ಕಾರ್ಯಕ್ರಮದಲ್ಲಿ ’ದಿ ಲಹಿರಿ ಕಲೆಕ್ಷನ್ಸ್: ಇಂಡಿಯನ್ ಎಂಡ್ ಹಿಮಾಲಯನ್ ಆರ್ಟ್ಸ್, ಎನ್ಷಿಯೆಂಟ್ ಎಂಡ್ ಮಾಡರ್ನ್’ನಲ್ಲಿ 4,50,000 ಡಾಲರ್ಗೆ ಹರಾಜಿಗಾಗಿ ಇಡಲಾಗಿತ್ತು.
ಅಪರೂಪದ ಮರಳುಗಲ್ಲಿನ ಸ್ಮಾರಕ ಸ್ತಂಭ ’ರಿಶಭನಾಥ’ ಕಲಾಕೃತಿ ರಾಜಸ್ಥಾನ ಅಥವಾ ಮಧ್ಯಪ್ರದೇಶದ ೧೦ನೇ ಶತಮಾನದ ಕಲಾಕೃತಿಗೆ ಸೇರಿದೆ ಎಂದು ನಂಬಲಾಗಿದೆ. ಮೊದಲ ಜೈನ ತೀರ್ಥಂಕರನನ್ನು ಬಿಂಬಿಸುವ ಈ ಕೆತ್ತನೆ ಸುಮಾರು 1,50,000 ಡಾಲರ್ ಮೌಲ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ.
ಮತ್ತೊಂದು ಕಲಾಕೃತಿ, ಅಶ್ವಾರೂಢ ದೇವತೆ ರೇವಂತನನ್ನು ಸೂಚಿಸುವಸುವ ಕಲಾಕೃತಿಯಾಗಿದ್ದು, ಇದರ ಮೌಲ್ಯ ಸುಮಾರು 3,00,000 ಡಾಲರ್ ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಓರ್ವನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಆತ ೭ ದೇಶಗಳಿಂದ ಲಕ್ಷಾಂತರ ಮಿಲಿಯನ್ ಡಾಲರ್ ಮೌಲ್ಯದ ಹಲವು ಕಲಾಕೃತಿಗಳನ್ನು ಕಳ್ಳತನ ಮಾಡಿರಬಹುದೆಂದು ಶಂಕಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.