News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ಲಂ ಮಕ್ಕಳಿಗಾಗಿ ಲೈಬ್ರರಿಯನ್ನು ಮುನ್ನಡೆಸುತ್ತಿದ್ದಾಳೆ 9 ವರ್ಷದ ಮುಸ್ಕಾನ್

OLYMPUS DIGITAL CAMERAಮುಸ್ಕಾನ್ ಅಹಿರ್‍ವಾರ್, ಮಧ್ಯಪ್ರದೇಶದ ಭೋಪಾಲದವಳಾದ ಈಕೆಯ ವಯಸ್ಸು ಬರೀ ೯. ಆದರೆ ಈಕೆ ಮಾಡಿದ ಕಾರ್ಯ ಮಾತ್ರ ಈಕೆಯ ವಯಸ್ಸಿಗೂ ಮೀರಿದ್ದು. ಸ್ಲಂ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಕಾರ್ಯದಲ್ಲಿ ನಿರತಳಾಗಿದ್ದಾಳೆ ಈಕೆ.

ಅರೆರಾ ಹಿಲ್ಸ್‌ನ ರಾಜ್ಯ ಶಿಕ್ಷಾ ಕೇಂದ್ರ ಹಿಂಭಾಗದಲ್ಲಿರುವ ಸ್ಲಂ ಏರಿಯಾದಲ್ಲಿ ತಮ್ಮ ಮನೆಯ ಹೊರಭಾಗದಲ್ಲಿ ಈಕೆ ಬಾಲ್ ಪುಸ್ತಕಾಲಯವನ್ನು ನಡೆಸುತ್ತಿದ್ದಾಳೆ. ಪ್ರತಿನಿತ್ಯ ಶಾಲೆಯಿಂದ ವಾಪಾಸ್ಸಾದ ಬಳಿಕ ಈ ಲೈಬ್ರರಿಯನ್ನು ಆಕೆ ತೆರೆಯುತ್ತಾಳೆ.

ಈ ಲೈಬ್ರರಿಯಲ್ಲಿ ರಾಜ್ಯ ಶಿಕ್ಷಾ ಕೇಂದ್ರದ ವತಿಯಿಂದ ನೀಡಲಾಗುವ ಎಲ್ಲಾ ಪುಸ್ತಕಗಳನ್ನು ಚಾಪೆಯ ಮೇಲೆ ಇಡಲಾಗಿದೆ. ಸ್ಲಂನಲ್ಲಿ ವಾಸಿಸುವ ಮಕ್ಕಳು ಈ ಪುಸ್ತಕವನ್ನು ಪಡೆಯುದಕ್ಕಾಗಿ ಸರಥಿ ಸಾಲಿನಲ್ಲಿ ಕಾದು ನಿಲ್ಲುತ್ತಾರೆ.

2015ರಲ್ಲಿ ಈ ಏರಿಯಾಗೆ ಬಂದ ಶಿಕ್ಷಣ ಅಧಿಕಾರಿಗಳು, ಇಲ್ಲಿ ಹಲವಾರು ಪುಸ್ತಕಗಳನ್ನು ಹಂಚಿ ಪ್ರತಿ ಮಕ್ಕಳು ಪರಸ್ಪರ ಹಂಚಿಕೊಂಡು ಈ ಪುಸ್ತಕವನ್ನು ಓದುವಂತೆ ಸೂಚಿಸಿದ್ದರು. ಅಲ್ಲದೇ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ರಸಪ್ರಶ್ನೆಯಲ್ಲಿ ಮುಸ್ಕಾನ್ ಗೆದ್ದಳು. ಆಕೆಯ ಪ್ರತಿಭೆಯನ್ನು ಕಂಡ ಅಧಿಕಾರಿಗಳು ಪುಸ್ತಕವನ್ನು ಮಕ್ಕಳಿಗೆ ಓದಿಸುವ ಜವಾಬ್ದಾರಿಯನ್ನು ಆಕೆಗೆ ನೀಡಿ ಹೋದರು. ಗಣರಾಜ್ಯೋತ್ಸವದ ಸಂದರ್ಭದಲ್ಲೂ ಇಲ್ಲಿನ ಮಕ್ಕಳಿಗೆ ಹೆಚ್ಚಿನ ಪುಸ್ತಕವನ್ನು ಸರ್ಕಾರ ನೀಡಿತ್ತು.

ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮುಸ್ಕಾನ್ ನೋಂದಾವಣಿ ಪುಸ್ತಕವೊಂದನ್ನು ಇಟ್ಟುಕೊಂಡು ಯಾವ ಮಕ್ಕಳು ಯಾವ ಪುಸ್ತಕವನ್ನು ಪಡೆದುಕೊಂಡಿದ್ದಾರೆ, ವಾಪಾಸ್ ಮಾಡಿದ್ದಾರೆಯೇ ಎಂಬೆಲ್ಲಾ ಮಾಹಿತಿಯನ್ನು ಬರೆದಿಡುತ್ತಾಳೆ. ಆಕೆಯ ಸಹೋದರಿ 7ನೇ ತರಗತಿಯ ನೇಹಾ ಆಕೆಯ ಕಾರ್ಯಕ್ಕೆ ಸಹಾಯ ಮಾಡುತ್ತಾಳೆ.

ಸದ್ಯ ಆಕೆಯ ಲೈಬ್ರರಿಯಲ್ಲಿ 119 ಪುಸ್ತಕಗಳಿದ್ದು ಅದನ್ನು ಅತ್ಯಂತ ಜಾಗರುಕತೆಯಿಂದ ನಿಭಾಯಿಸುತ್ತಾಳೆ. ಈ ಕೆಲಸ ನನಗೆ ಅತೀವ ಸಂತಸ ನೀಡುತ್ತದೆ ಎನ್ನುತ್ತಾಳೆ ಮುಸ್ಕಾನ್.

ಈ ಲೈಬ್ರರಿಯಲ್ಲಿ ಪುಸ್ತಕದ ಬಗ್ಗೆ ಚರ್ಚೆಗೆ, ಕಲಿಯುವಿಕೆಗೆ, ಕಥೆ ಕೇಳುವಿಕೆಗೂ ಸ್ಲಂ ಮಕ್ಕಳಿಗೆ ಅವಕಾಶ ಸಿಕ್ಕಿದೆ. ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ಮೂಡಿಸುವ ಕೇಂದ್ರವಾಗಿ ಇದು ಮುಂದುವರೆಯುತ್ತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top