ಬೆಳ್ತಂಗಡಿ: ವಿಶ್ವ ಯೋಗ ದಿನದ ಪ್ರಯುಕ್ತ ಜೂ. 21ರಂದು ಪ್ರಪಂಚದಾದ್ಯಂತ 30 ನಿಮಿಷಗಳ ಕಾಲ ಯೋಗ ನಡೆಸಲು ಕೇಂದ್ರ ಸರಕಾರ ಉದ್ದೇಶಿಸಿದೆ. ವಿದೇಶ ವ್ಯವಹಾರ ಖಾತೆಗಳ ಸಚಿವಾಲಯದಿಂದ ದೆಹಲಿಯಲ್ಲಿ ನಡೆದ ವಿಶ್ವಯೋಗ ದಿನ ಪ್ರಯುಕ್ತ ಸಮಾಲೋಚನಾ ಸಭೆಯಲ್ಲಿ ಉಜಿರೆ ಎಸ್ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಚಾರ್ಯ ಡಾ. ಪ್ರಶಾಂತ್ ಶೆಟ್ಟಿ ಭಾಗವಹಿಸಿದ್ದರು.
ವಿಶ್ವ ಸಂಸ್ಥೆ ಜೂ.21ನ್ನು ವಿಶ್ವಯೋಗ ದಿನವಾಗಿ ಘೋಷಿಸಿದೆ. ಈ ವರ್ಷ ಮೊದಲ ಬಾರಿಗೆ ಇದನ್ನು ಆಚರಿಸಲಾಗುತ್ತಿದೆ. ಬೆಳಗ್ಗೆ 8 ಗಂಟೆಯಿಂದ 8-30ರ ವರೆಗೆ ಯೋಗ ದಿನದ ಯೋಗ ಕಾರ್ಯಕ್ರಮ ನಡೆಯಲಿದೆ. ವಿದೇಶಗಳಲ್ಲಿ ಕೂಡಾ ಯೋಗ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಭಾರತೀಯ ಮೂಲ ಯೋಗದ ಬಗ್ಗೆ ಪ್ರಪಂಚದಾದ್ಯಂತ ಜಾಗೃತಿ ಮೂಡಿಸುವುದು, ಮನೋ ನಿಯಂತ್ರಣ, ಮನೋ ಕಾಯಿಲೆ ತಡೆಗಟ್ಟಲು ಯೋಗ ಒಂದೇ ದಾರಿ. ಯೋಗದಿಂದ ಆರೋಗ್ಯ ನಿಯಂತ್ರಣ ಸಾಧ್ಯ ಎಂದು ಯೋಗ ಆಚರಣೆಗೆ ತೀರ್ಮಾನಿಸಲಾಯಿತು. ಈಗಾಗಲೇ ಎನ್ಎಸ್ಎಸ್, ಎನ್ಸಿಸಿ ಹಾಗೂ ಸೇನೆಯಲ್ಲಿ ಯೋಗ ಕಡ್ಡಾಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಿ ಯೋಗವನ್ನು ಜೀವನ ಶೈಲಿಯಾಗಿಸುವುದು ಇದರ ಉದ್ಧೇಶ ಎಂದು ತಿಳಿಸಲಾಯಿತು.
ಸಭೆಯಲ್ಲಿ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್, ವಿದೇಶಾಂಗ ಕಾರ್ಯದರ್ಶಿ ಜೈಶಂಕರ್, ಶ್ರೀ ರವಿಶಂಕರ್ ಗುರೂಜಿ, ಕೊಯಮುತ್ತೂರಿನ ಈಶ ಫೌಂಡೇಶನ್ನ ಶ್ರೀ ಜಗ್ಗಿ ವಾಸುದೇವ್, ಬೆಂಗಳೂರು ಎಸ್ವ್ಯಾಸ ವಿವಿ ಕುಲಪತಿ ಡಾ. ಎಚ್.ಆರ್.ನಾಗೇಂದ್ರ, ಹರಿದ್ವಾರದ ಗಾಯತ್ರಿ ಪರಿವಾರದ ಡಾ. ಪ್ರಣವ್ ಪಾಂಡ್ಯ, ಕೈವಲ್ಯ ಧಾಮದ ಡಾ. ಸುಭೋಧ್ ತಿವಾರಿ, ಅರೊಬಿಂದೋ ಆಶ್ರಮದ ಡಾ. ಬಿಜಲಾನಿ, ಹರಿದ್ವಾರದ ಪತಂಜಲಿ ಆಶ್ರಮದ ಆಚಾರ್ಯ ಬಾಲಕೃಷ್ಣ, ಕೇಂದ್ರ ಸರಕಾರದ ಆಯುಷ್ ಕಾರ್ಯದರ್ಶಿ ಸಾನ್ಯಾಲ್, ಜತೆ ಕಾರ್ಯದರ್ಶಿ ಗನೇರಿವಾಲಾ, ಎಂ.ಡಿ.ವೈ.ಆರ್. ನಿರ್ದೇಶಕ ಬಸವ ರೆಡ್ಡಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.