ಭಾರತವನ್ನು ದಾಸ್ಯದಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಅತೀ ಪ್ರಮುಖ ಪಾತ್ರವನ್ನು ವಹಿಸಿದ ಘಟನೆಗಳಲ್ಲಿ ದಂಡಿ ಸತ್ಯಾಗ್ರಹ ಅಥವಾ ಉಪ್ಪಿನ ಸತ್ಯಾಗ್ರಹ ಕೂಡ ಒಂದು. ಇತಿಹಾಸ ಪುಟದಲ್ಲಿ ಈ ಉಪ್ಪಿನ ಸತ್ಯಾಗ್ರಹಕ್ಕೆ ಒಂದು ಪ್ರಮುಖ ಸ್ಥಾನವಿದೆ. ಈ ಐತಿಹಾಸ ಸತ್ಯಾಗ್ರಹ ಆರಂಭಗೊಂಡಿದ್ದು ಮಾ.12ರ 1930ರಂದು.
ಬ್ರಿಟಿಷ್ ಆಡಳಿತಕ್ಕೆ ಅಸಹಾಕಾರವನ್ನು ತೋರಿಸುವ ಸಲುವಾಗಿ ಮಹಾತ್ಮ ಗಾಂಧಿ ಉಪಪಿನ ಸತ್ಯಾಗ್ರಹವನ್ನು ಆರಂಭಿಸಿದರು. ಉಪ್ಪಿಗೆ ತೆರಿಗೆ ವಿಧಿಸಿಸ ಬ್ರಟಿಟಷರ ಕ್ರಮವನ್ನು ವಿರೋಧಿಸಿ ಸ್ವತಃ ಸಮುದ್ರ ನೀರಿನಿಂದ ಜನರೇ ಉಪ್ಪು ತಯಾರಿಸಿ ಆ ಮೂಲಕ ಬ್ರಿಟಿಷರಿಗೆ ತಿರುಗೇಟು ನೀಡಲು ಇದನ್ನು ಆರಂಭಿಸಲಾಗಿತ್ತು.
ಅಹ್ಮದಾಬಾದ್ ಸಮೀಪದ ಸಬರಮತಿ ಆಶ್ರಮದಿಂದ ಗಾಂಧೀಜಿ ಈ ಚಳುವಳಿಯನ್ನು ಆರಂಭಿಸಿದರು. 240ಮೈಲಿ ಕ್ರಮಿಸಿ ಕರಾವಳಿ ಪ್ರದೇಶ ದಂಡಿಗೆ ತಲುಪುವ ಗುರಿಯೊಂದಿಗೆ 78 ಮಂದಿಯ ಜೊತೆಗೂಡಿ ಕಾಲ್ನಡಿಗೆ ಆರಂಭಿಸಲಾಯಿತು. ಆದರೆ ನೋಡು ನೊಡುತ್ತಿದ್ದಂತೆ ಅಪಾರ ಪ್ರಮಾಣದ ಭಾರತೀಯರು ಇದರಲ್ಲಿ ಪಾಲ್ಗೊಂಡರು. 24 ದಿನಗಳ ಕಾಲ್ನಡಿಗೆಯ ಬಳಿಕ ದಂಡಿಗೆ ತೆರಳಿ ತೆರಿಗೆ ಪಾವತಿಸದೆ ಉಪ್ಪು ತಯಾರು ಮಾಡುವುದು ಇವರ ಉದ್ದೇಶವಾಗಿತ್ತು.
ಜಗತ್ತಿನಾದ್ಯಂತ ಉಪ್ಪಿನಸತ್ಯಾಗ್ರಹ ಭಾರೀ ಪ್ರಚಾರ ಮಾಡುತ್ತಿದ್ದಂತೆ ಭಾರತ ಸ್ವಾತಂತ್ರ್ಯ ಚಳುವಳಿಗೂ ಹೊಸ ಹುರುಪು ಸಿಕ್ಕಿತು. ಅಸಹಾಕಾರ ಚಳುವಳಿ ಇನ್ನಷ್ಟು ತೀವ್ರಗೊಂಡಿತು.
1930 ಎಪ್ರಿಲ್ 6ರ ಬೆಳಿಗ್ಗೆ 6:30ರ ಸುಮಾರಗೆ ಗಾಂಧೀ ಸೇರಿದಂತೆ ಲಕ್ಷಾಂತರ ಭಾರತೀಯರು ಬ್ರಟಿಷರ ಉಪ್ಪಿನ ಕಾಯ್ದೆಯನ್ನು ಉಪ್ಪು ತಯಾರಿಸುವ ಮೂಲಕ ಮುರಿದರು. ಇದು ಬ್ರಟಿಷ್ ವಿರುದ್ಧ ಭಾರತೀಯರು ಸಾರಿದ ಅತೀದೊಡ್ಡ ಅಸಹಾಕಾರ ಚಳುವಳಿಯಾಗಿತ್ತು. ಇದು ಜಗತ್ತಿನ ಬದಲಾವಣೆ, ಭಾರತೀಯರ ಬಗ್ಗೆ ಬ್ರಟಿಷರು ತಳೆದಿದ್ದ ನಿಲುವು ಬದಲಾವಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿತು.
ಈ ಚಳುವಳಿಯ ಮೂಲಕವೇ ಹಲವಾರು ಭಾರತೀಯರು ಮೊದಲ ಬಾರಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಒಂದರ್ಥದಲ್ಲಿ ಸ್ವಾತಂತ್ರ್ಯ ಚಳುವಳಿಗೆ ಉಪ್ಪಿನ ಸತ್ಯಾಗ್ರಹ ಒಂದು ಅಮೋಘ ಪ್ರೇರಣೆಯಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.