ಭೋಪಾಲ್: ನಾಸಾದ ದಿವಂಗತ ಗಗನಯಾತ್ರಿ ಕಲ್ಪನಾ ಚಾವ್ಲಾರ ಸಾಹಸದಿಂದ ಪ್ರೇರಿತಳಾದ ಹೆಣ್ಣುಮಗಳೊಬ್ಬಳು ಇದೀಗ ದೇಶದ ವಾಯುಸೇನೆಯ ಮೊತ್ತ ಮೊದಲ ಫೈಟರ್ ಪೈಲೆಟ್ ಆಗಿ ನಿಯೋಜಿತಳಾಗಲಿದ್ದಾಳೆ.
22 ವರ್ಷದ ಅವ್ನಿ ಚರ್ತುವೇದಿ ಮಧ್ಯಪ್ರದೇಶದ ರೆವಾದವಳು, ಕಲ್ಪನಾ ಚಾವ್ಲಾ ದುರಂತಕ್ಕೀಡಾದ ವೇಳೆ ಸುದ್ದಿಯನ್ನು ಟಿವಿಯಲ್ಲಿ ವೀಕ್ಷಿಸಿ ಈಕೆಯ ತಾಯಿ ಸವಿತಾ ಚರ್ತುವೇದಿ ಆಳುತ್ತಿದ್ದಾಗ ಅವರ ಬಳಿ ಬಂದ ಈಕೆ , ’ಅಳಬೇಡಿ ಅಮ್ಮಾ, ಮುಂದಿನ ಕಲ್ಪನಾ ಚಾವ್ಲಾ ನಾನಾಗುತ್ತೇನೆ’ ಎಂದಿದ್ದಳು. ಆಗ ಅವಳು ಮೂರನೇ ತರಗತಿಯ ಪುಟಾಣಿ ಬಾಲೆ.
ಭಾರತದ ಮಿಸೈಲ್ ಮ್ಯಾನ್ ಎಂದೇ ಕರೆಯಲ್ಪಡುವ ಮಾಜಿ ರಾಷ್ಟ್ರಪತಿ ದಿವಂಗತ ಡಾ.ಎಪಿಜೆ ಅಬ್ದುಲ್ ಕಲಾಂ ಅವರೂ ಆಕೆಗೆ ಸ್ಫೂರ್ತಿ ಸೆಲೆಯಾಗಿದ್ದಾರೆ. ದೇಶವನ್ನು ಉನ್ನತ ಮಟ್ಟಕ್ಕೇರಿಸಿ ಎಂದು ಸದಾ ಅವರು ಮಾಡುತ್ತಿದ್ದ ಭಾಷಣ ಆಕೆಗೆ ಅಚ್ಚುಮೆಚ್ಚು ಅದನ್ನು ಕೇಳುತ್ತಲ್ಲೇ ಬೆಳೆದವಳು ಆಕೆ.
ಆಕೆಯ ಕುಟುಂಬದಲ್ಲಿ ಅನೇಕರು ಸೇನೆಯಲ್ಲಿ ದುಡಿಯುತ್ತಿದ್ದಾರೆ. ಅವರ ಸಮವಸ್ತ್ರವನ್ನು ಕಂಡು ತಾನೂ ಆ ಸಮವಸ್ತ್ರವನ್ನು ತೊಡಬೇಕು ದೇಶ ಸೇವೆ ಮಾಡಬೇಕು ಎಂಬ ಅದಮ್ಯ ಆಸೆ ಅವ್ನಿಯದ್ದಾಗಿತ್ತು.
ಕಂಪ್ಯೂಟರ್ ಸೈನ್ಸ್ನಲ್ಲಿ ಬಿಟೆಕ್ ಮುಗಿಸಿರುವ ಅವ್ನಿ ಶೇ.೮೦ರಷ್ಟು ಅಂಕ ಪಡೆದವಳು, ಬಯಸಿದ್ದರೆ ಕೈತುಂಬಾ ಸಂಬಳ ತರುವ ಉದ್ಯೋಗಗಕ್ಕೆ ಸೇರಬಹುದಿತ್ತು, ಆದರೆ ಸೇನೆಯ ಸಮವಸ್ತ್ರ ತೊಟ್ಟು ಆಗಸದಲ್ಲಿ ವಿಮಾನ ಹಾರಿಸಬೇಕು ಹೆಬ್ಬಯಕೆಯ ಆಕೆ ಸೇರಿದ್ದು ವಾಯುಸೇನೆಗೆ.
ಅದೃಷ್ಟವೆಂಬಂತೆ ಫೈಟರ್ ಪೈಲೆಟ್ ತರಬೇತಿಗೂ ಆಕೆ ಸೆಲೆಕ್ಟ್ ಆದಳು. ಈಕೆ ಇದೀಗ ದೇಶದ ಮೊದಲ ಮಹಿಳಾ ಫೈಟರ್ ಪೈಲೆಟ್ಗಳಾಗುವ ಮೂವರು ಮಹಿಳೆಯರಲ್ಲಿ ಒಬ್ಬಳಾಗಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.