ನವದೆಹಲಿ: ಟ್ವಿಟರ್ ಮೂಲಕ ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಮುಂದಾದ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತಿರುಗೇಟು ನೀಡಿದೆ.
‘ನಿಮ್ಮ ಟ್ವಿಟರ್ ಸಮಜಾಯಿಷಿ ನಮಗೆ ಅಗತ್ಯವಿಲ್ಲ, ಏನು ಹೇಳುವುದಿದ್ದರೂ ನಮ್ಮ ಕಛೇರಿಗೆ ಬಂದು ಹೇಳಿ’ ಎಂದು ಜಾರಿ ನಿರ್ದೇಶನಾಲಯ ಕಟು ಸಂದೇಶ ರವಾನಿಸಿದೆ.
ವಿವಿಧ ಬ್ಯಾಂಕುಗಳಿಂದ ಪಡೆದುಕೊಂಡ ಸುಮಾರು 9ಸಾವಿರ ಕೋಟಿ ಸಾಲವನ್ನು ಹೇಗೆ ಪಾವತಿ ಮಾಡುತ್ತೀರಿ ಎಂಬ ಬಗ್ಗೆ ವಿವರಣೆ ನೀಡುವಂತೆ ಲಮ್ಯ ಅವರಿಗೆ ಮಾ.18ರವರೆಗೆ ಸಮಯಾವಕಾಶವನ್ನು ನೀಡಲಾಗಿದೆ.
ಮಲ್ಯ ನೀಡಿರುವ ಟ್ವಿಟರ್ ವಿವರಣೆಯನ್ನು ಪರಿಗಣಿಸಲು ಸಾಧ್ಯವಿಲ್ಲ, ಸಮನ್ಸ್ಗೆ ಅವರು ಖುದ್ದಾಗಿ ಬಂದು ಉತ್ತರಿಸಬೇಕು ಎಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮಲ್ಯ ಅವರಿಗೆ ರಾಯಭಾರ ಕಛೇರಿ ಮೂಲಕ ಲಂಡನನಿಗೆ ಸಮನ್ಸ್ ಕಳುಹಿಸಿಕೊಡಬೇಕಾಗಿದೆ. ಮಾ.18ರೊಳಗೆ ಉತ್ತರಿಸದಿದ್ದ ಪಕ್ಷದಲ್ಲಿ ಕಠಿಣಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.