ಜೋಗಿಂದರ್ ಶರ್ಮಾ, 2007ರ ವಿಶ್ವ ಟಿ20 ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಹೀರೋ ಆದವನು. ಇದೀಗ ಮತ್ತೆ ಈತ ಸುದ್ದಿಯಲ್ಲಿದ್ದಾನೆ. ಕ್ರಿಕೆಟ್ ಆಟದಿಂದ ಅಲ್ಲ, ಬದಲಾಗಿ ಪೊಲೀಸ್ ಅಧಿಕಾರಿಯಾಗಿ ಸುದ್ದಿ ಮಾಡಿದ್ದಾನೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಫೈನಲ್ ಓವರ್ನಲ್ಲಿ ಬೌಲಿಂಗ್ ಮಾಡಿದ್ದ ಈತ ಭಾರತವನ್ನು ವಿಜಯಶಾಲಿಯನ್ನಾಗಿಸಿದ್ದ.
ಭಾರತ ನೀಡಿದ್ದ 157 ರನ್ಗಳ ಗುರಿ ಬೆನ್ನತ್ತಿದ್ದ ಪಾಕಿಸ್ಥಾನ 9 ವಿಕೆಟ್ ಕಳೆದುಕೊಂಡು ಕೊನೆಯ ಓವರ್ನಲ್ಲಿ 13 ರನ್ ಪೇರಿಸಬೇಕಿತ್ತು. ಫುಲ್ ನರ್ವಸ್ ಆಗಿದ್ದ ಜೋಗಿಂದರ್ ವೈಡ್ ಮೇಲೆ ಮೈಡ್ ಹಾಕಿ ಒಂದು ಸಿಕ್ಸ್ನ್ನು ನೀಡಿದ್ದ. ಇನ್ನೆನೂ ಮ್ಯಾಚ್ ಕೈತಪ್ಪಿತು ಎಂದೇ ಎಲ್ಲರು ಭಾವಿಸಿದರು. ಆದರೆ ಅದೃಷ್ಟವೆಂಬಂತೆ ಜೋಗಿಂದರ್ ಹಾಕಿದ ಬೌಲಿಂಗ್ಗೆ ಪಾಕ್ ಆಟಗಾರ ತಬ್ಬಿಬ್ಬಾಗಿ ಕ್ಯಾಚ್ ಕೊಟ್ಟೆಬಿಟ್ಟ. ಭಾರತ ಐದು ವಿಕೆಟ್ಗಳ ಜಯ ದಾಖಲಿಸಿತು.
ಆದರೆ ಬಳಿಕದ ದಿನಗಳಲ್ಲಿ ಫಾಮ್ ಕಳೆದುಕೊಂಡ ಜೋಗಿಂದರ್ ತಂದಡಿಂದ ಸ್ಥಾನವನ್ನೂ ಕಳೆದುಕೊಳ್ಳಬೇಕಾಯಿತು. 2011ರಲ್ಲಿ ದ್ವಾರಕದಲ್ಲಿ ನಡೆದ ಅಪಘಾತ ಕೂಡ ಈತನನ್ನು ಆಟದಿಂದ ದೂರವೇ ಉಳಿಯುವಂತೆ ಮಾಡಿತ್ತು.
ಆದರೀಗ ಜೋಗಿಂದರ್ ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ ಹರಿಯಾಣ ಪೊಲೀಸ್ ಇಲಾಖೆಗೆ ಅವರು ನಿಯುಕ್ತಿಗೊಂಡಿದ್ದಾರೆ. ಅದು ಕೂಡ ಡಿಎಸ್ಪಿ ಆಗಿ. ದಕ್ಷ ಪೊಲೀಸ್ ಆಗಿ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.