ನವದೆಹಲಿ: ಭಾರತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ತರುವಾಯ ಎಲ್ಟಿಟಿಇಗೆ ತಪ್ಪಿನ ಅರಿವಾಯಿತೇ? ಎಂಬ ಪ್ರಶ್ನೆಗೆ ಹೌದು ಎನ್ನುತ್ತಿದೆ ನೂತನ ಪುಸ್ತಕವೊಂದು.
ಎಲ್ಟಿಟಿಇ ಬೆಂಬಲಿಗ ದಿವಂಗತ ಅನ್ಟೋನ್ ಬಾಲಸಿಂಗಮ್ ಅವರು ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ್ದು ಎಲ್ಟಿಟಿಇಯ ಬಹುದೊಡ್ಡ ಪ್ರಮಾದ ಎಂಬುದಾಗಿ ಹೇಳಿದ್ದರು ಎನ್ನುವುದನ್ನು ಸಾಲ್ಟರ್ ಅವರ ಪುಸ್ತಕ ’ಟು ಎಂಡ್ ಎ ಸಿವಿಲ್ ವಾರ್’ನಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚಿಗಷ್ಟೇ ರಿಲೀಸ್ ಆದ ಈ ಪುಸ್ತಕ 549 ಪುಟಗಳನ್ನು ಹೊಂದಿದ್ದು, ಮೂರು ದಶಕಗಳಿಂದ ಶ್ರೀಲಂಕಾದಲ್ಲಿ ನಡೆಯುತ್ತಿದ್ದ ನಾಗರಿಕ ಯುದ್ಧ ಹೇಗೆ ಅಂತ್ಯವಾಯಿತು ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡಿದೆ.
2009ರಲ್ಲಿ ಶ್ರೀಲಂಕಾ ಸೇನೆಯು ಎಲ್ಟಿಟಿಇ ವಿರುದ್ಧ ಸಮರ ಸಾರಿ ಅವರ ನಾಯಕರಾದ ಪ್ರಭಾಕರನ್ ಮತ್ತು ಪೊಟ್ಟು ಅಮ್ಮನ್ನನ್ನು ಕೊಂದು ಸದಸ್ಯರನ್ನು ದಮನಿಸಿದ ತರುವಾಯ ನಾಗರಿಕ ಯುದ್ಧ ಅಲ್ಲಿ ಅಂತ್ಯಗೊಂಡಿತ್ತು.
ರಾಜೀವ್ ಗಾಂಧಿಯನ್ನು ಕೊಂದಿದ್ದು ಕೂಡ ಎಲ್ಟಿಟಿಇಗೆ ಮುಳುವಾಯಿತು. ಇದು ಅವರು ಮಾಡಿದ ದೊಡ್ಡ ಪ್ರಮಾದ ಎಂಬುದನ್ನು ಸ್ವತಃ ಎಲ್ಟಿಟಿಇ ಮುಖಂಡರೊಬ್ಬರು ಹೇಳಿಕೊಂಡಿದ್ದರು ಎಂಬುದಾಗಿ ಪುಸ್ತಕ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.