ಶ್ರೀನಗರ: ಕೇಂದ್ರದ ತೀವ್ರ ಒತ್ತಡದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸರು ದೇಶದ್ರೋಹಿ ಪ್ರತ್ಯೇಕತಾವಾದಿ, ಭಾರತದ ನೆಲದಲ್ಲಿ ಪಾಕಿಸ್ಥಾನದ ಧ್ವಜ ಹಾರಿಸಿದ್ದ ಮಸರತ್ ಆಲಂನನ್ನು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ನಡೆದ ಸಮಾವೇಶದಲ್ಲಿ ಈತ ಮತ್ತು ಈತನ ಬೆಂಬಲಿಗರು ಶ್ರೀನಗರದ ಲಾಲ್ಚೌಕ್ನಲ್ಲಿ ಪಾಕ್ ಧ್ವಜವನ್ನು ಹಾರಾಟ ನಡೆಸಿದ್ದರು. ಆಲಂನೊಂದಿಗೆ ಹುರಿಯತ್ ನಾಯಕ ಸೈಯದ್ ಅಲಿ ಷಾ ಗಿಲಾನಿಯನ್ನು ಗೃಹಬಂಧನದಲ್ಲಿ ಇಡಲಾಗಿದೆ.
ಪ್ರಸ್ತುತ ಆಲಂನನ್ನು ಶಹೀದ್ಗುಂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಜೈಲಿಗೆ ಹಾಕಲಾಗುತ್ತದೆ.
ಪುಲ್ವಾನ್ ಜಿಲ್ಲೆಯ ಟ್ರಾಲ್ ನಗರದಲ್ಲಿ ಶುಕ್ರವಾರ ಭಾರತ ವಿರೋಧಿ ಸಮಾವೇಶವನ್ನು ನಡೆಸಲು ಉದ್ದೇಶಿಸಿದ ಹಿನ್ನಲೆಯಲ್ಲಿ ನಿನ್ನೆಯೇ ಗಿಲಾನಿ ಮತ್ತು ಆಲಂನನ್ನು ಗೃಹಬಂಧನದಲ್ಲಿ ಇಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ಆಲಂನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
‘ಬಂಧನ ನನಗೇನು ಹೊಸತಲ್ಲ, ಇದರಲ್ಲಿ ಯಾವುದೇ ವಿಶೇಷತೆ ಇಲ್ಲ, ಸಮಾವೇಶವನ್ನು ವಿಫಲಗೊಳಿಸುವುದಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಆದರೆ ಜನ ಸಮಾವೇಶಕ್ಕೆ ಹಾಜರಾಗಿ ಅದನ್ನು ಯಶಸ್ವಿಗೊಳಿಸಿಯೇ ತೀರುತ್ತಾರೆ’ ಎಂದು ಆಲಂ ಜಂಭ ಕೊಚ್ಚಿಕೊಂಡಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.