ನವದೆಹಲಿ: ದೆಹಲಿಯ ವಿವಿಧ ಮಾರುಕಟ್ಟೆ ಪ್ರದೇಶಗಳಲ್ಲಿ ಉಚಿತ ವೈಫೈ ಸೇವೆ ಒದಗಿಸುವ ದೃಷ್ಟಿಯಿಂದ ದೆಹಲಿ ರಾಜ್ಯದ ಆಮ್ ಆದ್ಮಿ ಸರ್ಕಾರ (ಆಪ್) ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ವೈಫೈ ಸೇವೆ ಯೋಜನೆ ಆರಂಭಿಸಲು ಮುಂದಾಗಿದೆ.
ಆಪ್ ಸರ್ಕಾರ ಮಾ.15ರಂದು ಉತ್ತರ ದೆಹಲಿಯ ಬುರಾರಿ ಸಮೀಪದ ಸಂತ ನಗರ ಮಾರುಕಟ್ಟೆ ಪ್ರದೇಶದಲ್ಲಿ ವೈಫೈ ಸೇವೆ ಆರಂಭಿಸಲಿದ್ದು, ಬಳಕೆದಾರರು ಪ್ರತಿ ನಿತ್ಯ 50MB ಉಚಿತ ಡಾಟಾ ಡೌನ್ಲೋಡ್ ಮಾಡಬಹುದು ಎಂದು ಆಪ್ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಆಪ್ ಸರ್ಕಾರದ ಸಲಹಾ ಸಮಿತಿ ’ದೆಹಲಿ ದೈಲಾಗ್ ಕಮಿಷನ್’ ಸಂತ ನಗರದ ಸ್ಥಳೀಯ ಇಂಟರ್ನೆಟ್ ವಿತರಕನೊಂದಿಗೆ ಮಾತುಕತೆ ನಡೆಸಿದೆ. ಮೂರು ತಿಂಗಳ ಕಾಲ ವೈಫೈ ಶುಲ್ಕ ರಹಿತವಾಗಿರಲಿದೆ. ಈ ಸೇವೆಗೆ ಜನರ ಉತ್ತಮ ಪ್ರತಿಕ್ರಿಯೆ ದೊರೆತಲ್ಲಿ ದೆಹಲಿಯ ಇತರ ಮಾರುಕಟ್ಟೆ ಪ್ರದೇಶಗಳಲ್ಲೂ ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಟೆಲಿಕಾಂ ಆಯೋಜಕ ರಿಲಯನ್ಸ್ ಜಿಯೊ, ಟಿ-20 ವಿಶ್ವಕಪ್ ವೇಳೆ ಭಾರತದ ಆರು ಸ್ಟೇಡಿಯಂಗಳಲ್ಲಿ ಉಚಿತ ವೈಫೈ ಸೇವೆ ಒದಗಿಸುವುದಾಗಿ ಹೇಳಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.