ಚೆನೈ : ಸ್ವದೇಶಿ ಮಾರ್ಗದರ್ಶಿ ವ್ಯವಸ್ಥೆಯನ್ನು ಹೊಂದಲು ಐಆರ್ಎನ್ಎಸ್ಎಸ್ 1ಎಫ್ ಭಾರತದ 6ನೇ ಉಪಗ್ರಹವನ್ನು ಇಸ್ರೋ ಮಾರ್ಚ್ 10 ರಂದು ಸಂಜೆ 4.01ನಿಮಷಕ್ಕೆ ನಭಕ್ಕೆ ಉಡಾವಣೆಗೊಳಿಸಿದೆದೆ.
ಉಢಾವಣೆಗೊಂಡ 20 ನಿಮಿಷದಲ್ಲಿ ಉಪಗ್ರಹವು ತನ್ನ ಕಕ್ಷೆಯನ್ನು ಸೇರಿದ್ದು, ಇದು ಪಿಎಸ್ಎಲ್ ವಿ ಸಿ32 ರಾಕೆಟ್ ಮೂಲಕ ಶ್ರೀ ಹರಿಕೋಟಾದ 2 ನೇ ರಾಕೆಟ್ ಉಢಾವಣಾ ಕೇಂದ್ರದಿಂದ ಉಢಾಯಿಸಲಾಗಿದೆ. ಇದು ಸತತ 33ನೇ ಬಾರಿಗೆ ಪಿಎಸ್ಎಲ್ ವಿ ರಾಕೆಟ್ ಮೂಲಕ ನಡೆಸಿದ ಉಢಾವಣೆ ಎಂದು ಇಸ್ರೋ ತಿಳಿಸಿದೆ.
ಇದು ಅತಿ ಮುಖ್ಯವಾದ ಉಢಾವಣೆಯಾಗಿದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹೇಳಿದ್ದು, ಈ ವರ್ಷದ ಮುಧ್ಯಭಾಗದಲ್ಲಿ 7ನೇ ಉಪಗ್ರಹ ಉಡಾವಣೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ತಿಳಿದ್ದಾರೆ. ಪ್ರಸಕ್ತ ಉಢಾವಣೆಗೊಂಡ ಉಪಗ್ರಹವು 1425 ಕೆಜಿ ಯಷ್ಟು ಭಾರಹೊಂದಿದ್ದು, ಈಗಾಗಲೇ 5 ಉಪಗ್ರಹಗಳನ್ನು ಉಡಾವಣೆ ಮಾಡಿಲಾಗಿದು. 2013 ರಿಂದ 2015 ರವರೆಗೆ 4 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಐಆರ್ಎನ್ಎಸ್ಎಸ್ 1ಎಫ್ ಯಶಸ್ವಿ ಉಢಾವಣೆ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ಇದಕ್ಕಾಗಿ ಪರಿಶ್ರಮ ನಡೆಸಿದ ವಿಜ್ಞಾನಿಗಳಿಗೆ ಮತ್ತು ಇಸ್ರೋಗೆ ಪ್ರಧಾನಿ ನರೇಂದ್ರಮೋದಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಭಾಶಯಗಳನ್ನು ಕೋರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.