ಮಂಗಳೂರು : ಅತೀ ನಿರೀಕ್ಷೆಯ ಬೀಕನ್ಸ 2016ರ ಎರಡನೇ ದಿನವು ಅತ್ಯಂತ ಅದ್ದೂರಿಯಾಗಿ ನೆರವೇರಿತು. ನಟೇಶ್ ಉಳ್ಳಾಲ್ ರವರು ವೃತ್ತಿಯಲ್ಲಿ ಸಾಕ್ಷ್ಯಾ ಚಿತ್ರಗಳ ನಿರ್ದೇಶಕರಾಗಿರುತ್ತಾರೆ.ಇವರು ಪತ್ರಿಕೋದ್ಯಮ ವಿಧ್ಯಾರ್ಥಿಗಳಿಗೆ ಸಾಕ್ಷ್ಯ ಚಿತ್ರಗಳನ್ನು ಮಾಡುವುದರ ಬಗ್ಗೆ ನಿಟ್ಠೆ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ನಲ್ಲಿ ಆಯೋಜಿಸಿದ್ದ ಚಿತ್ರ ವೀಕ್ಷಣೆ ಹಾಗೂ ಸಂವಾದದ ಕಾರ್ಯಗಾರದಲ್ಲಿ ತಿಳಿಸಿದರು. ಅವರು ಮಾಡಿದ, ಹಾಗೂ ಮಾಡಲು ಸ್ಫೂರ್ತಿ ನೀಡಿದ ಹಲವು ನಿರ್ದೇಶಕರ ಚಿತ್ರದ ತುಣುಕನ್ನು ಪ್ರದರ್ಶಿಸಿದರು.
ಮಧ್ಯಾಹ್ನ ಅನೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅದರಲ್ಲಿ ಅನೇಕ ಸ್ಪರ್ಧಾಳುಗಳು ಸ್ಪರ್ಧಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡರು. ಮೂಕ ಪಾತ್ರಾಭಿನಯ, ಕಿರುಚಿತ್ರ ಸ್ಪರ್ಧೆ, ರಸಪ್ರಶ್ನೆ ಹೀಗೆ ಹಲವು ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದವು. ನಂತರ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಸತತ ಮೂರನೇ ಬಾರಿಗೆ ಸಮಗ್ರ ಪ್ರಶಸ್ತಿ ಪಡೆದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.