ನವದೆಹಲಿ: 294 ಸದಸ್ಯ ಬಲದ ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಯಾವ ಯಾವ ಪಕ್ಷಗಳು ಎಷ್ಟು ಎಷ್ಟು ಸ್ಥಾನಗಳಲ್ಲಿ ಜಯಗಳಿಸಲಿವೆ ಎಂಬ ಬಗ್ಗೆ ಈಟಿವಿ ಬಾಂಗ್ಲಾ ಸಮೀಕ್ಷೆ ನಡೆಸಿದೆ.
ಇದರ ಪ್ರಕಾರ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 201 ಸ್ಥಾನಗಳನ್ನು ಪಡೆದು ಜಯಭೇರಿ ಬಾರಿಸಲಿದೆ. 2011ರಲ್ಲಿ ಪಡೆದುದಕ್ಕಿಂತಲೂ ಇದು ಹೆಚ್ಚು.
ಕಾಂಗ್ರೆಸ್ನೊಂದಿಗೆ ಹೊಂದಾಣಿಕೆಗೆ ಮುಂದಾಗಿರುವ ಎಡಪಕ್ಷಗಳು ಕೇವಲ 34 ಸ್ಥಾನ ಮಾತ್ರ ಪಡೆಯಲಿದೆ. ಕಳೆದ ಬಾರಿಗಿಂತಲೂ ಇದು ಕಳಪೆ ಸಾಧನೆಯಾಗಲಿದೆ. ಕಾಂಗ್ರೆಸ್ 27 ಸ್ಥಾನ ಗಳಿಸಲಿದೆ.
ಬಿಜೆಪಿ ಯಾವುದೇ ಸುಧಾರಣೆ ಕಾಣುವುದಿಲ್ಲ ಎಂದಿರುವ ಸಮೀಕ್ಷೆ, ಒಂದು ಸ್ಥಾನ ಪಡೆದುಕೊಳ್ಳಲಿದೆ ಎಂದಿದೆ.
ಎಪ್ರಿಲ್ 4ರಿಂದ 11ರವರೆಗೆ 6 ಹಂತದಲ್ಲಿ ಇಲ್ಲಿ ಚುನಾವಣೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.