ತಿರುವನಂತಪುರಂ: ಅದೃಷ್ಟ ಎಂಬುದು ಯಾವಾಗ ಕೈ ಹಿಡಿಯುತ್ತದೆ, ಯಾವಾಗ ಕೈ ಬಿಡುತ್ತದೆ ಎಂಬುದು ಯಾರಿಗೂ ತಿಳಿದಿರಲ್ಲ. ಇದೇ ರೀತಿ ಪಶ್ಚಿಮಬಂಗಾಳದ ಯುವಕನೊಬ್ಬನಿಗೆ ಕೇರಳದಲ್ಲಿ ಅದೃಷ್ಟದ ಬಾಗಿಲೇ ತೆರೆದಿದೆ.
22 ವರ್ಷದ ಮೊಫಿಜುಲ್ ರಹಾನ ಶೇಖ್ ಎಂಬಾತ ಮಾಲ್ಡಾ ಜಿಲ್ಲೆಯ ಲಕ್ಷೀಪುರದಿಂದ ಕೇರಳಕ್ಕೆ ಕೆಲಸಕ್ಕೆಂದು ಬಂದವನು. ಮಾ.4ರಂದು ಈತ ಕೇರಳ ಸರ್ಕಾರದ ಕಾರುಣ್ಯ ಲಾಟರಿಯನ್ನು ಖರೀದಿ ಮಾಡಿದ್ದಾನೆ.
ಅದರ ಮರುದಿನ ಲಾಟರಿ ಡ್ರಾ ಆಗಿದ್ದು, ಅಚ್ಚರಿ ಎಂಬಂತೆ ಶೇಖ್ಗೆ ಒಂದು ಕೋಟಿ ರೂಪಾಯಿ ಲಾಟರಿ ಹೊಡೆದಿದೆ. ತಕ್ಷಣವೇ ಭಯಭೀತನಾದ ಈತ ಸೀದಾ ಪೊಲೀಸ್ ಸ್ಟೇಶನ್ನಿಗೆ ಹೋಗಿ ಪೊಲೀಸರ ರಕ್ಷಣೆ ಕೇಳಿದ್ದಾನೆ. ತನ್ನ ಮೇಲೆ ಹಲ್ಲೆ ನಡೆಯಬಹುದು ಎಂಬ ಆತಂಕ ಈತನಿಗಿತ್ತು.
ಬಳಿಕ ಪೊಲೀಸರು ಈತನನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ ಅಕೌಂಟ್ ಓಪನ್ ಮಾಡಿಸಿ ಹಣವನ್ನು ಅಲ್ಲಿ ಡೆಪೋಸಿಟ್ ಮಾಡಲು ಸೂಚಿಸಿದ್ದಾರೆ. ಅದೇನೆಯಿರಲಿ ಕೆಲಸಕ್ಕಾಗಿ ಬಂವನಿಗೆ ಕೇರಳದಲ್ಲಿ ಕೋಟಿಯೇ ಒಲಿದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.