ಬೆಳ್ತಂಗಡಿ : ರುಡ್ಸೆಟ್ ಸಂಸ್ಥೆಯ ಹುಟ್ಟು ಮತ್ತು ಅದರ ಬೆಳವಣಿಗೆಯ ಜೊತೆಗೆ ಕೇಂದ್ರ ಸರಕಾರ ರುಡ್ಸೆಟ್ ಸಂಸ್ಥೆಯನ್ನು ಅನುಕರಣೀಯ ಮಾದರಿ ಎಂದು ಗುರುತಿಸಿ ಇಂದು ಬ್ಯಾಂಕುಗಳ ಸಹಯೋಗದೊಂದಿಗೆ ಸುಮಾರು 600 ಗ್ರಾಮೀಣ ಸ್ವ ಉದ್ಯೋಗ ಕೇಂದ್ರ (ಆರ್ಸೆಟಿ)ಗಳನ್ನು ತೆರೆದಿದೆ ಎಂದುನೇಷನಲ್ ಅಕಾಡಮಿ ಆಫ್ ರುಡ್ಸೆಟಿಯ ಅಧ್ಯಕ್ಷರು, ರುಡ್ಸೆಟ್, ಆರ್ಸೆಟಿ ಸಂಸ್ಥೆಗಳ ಅಧ್ಯಕ್ಷರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಬುಧವಾರ ಧರ್ಮಸ್ಥಳದಲ್ಲಿ ಬೆಂಗಳೂರಿನಲ್ಲಿರುವ ರುಡ್ಸೆಟ್ ನೇಷನಲ್ ಅಕಾಡಮಿ ಅಯೋಜಿಸಿದ್ದ 82 ನೇ ತಂಡದ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ದೇಶದಾದ್ಯಂತ 14 ರಾಜ್ಯಗಳ 11 ವಿವಿಧ ಬ್ಯಾಂಕುಗಳಿಂದ ಪ್ರಾಯೋಜಿಸಲ್ಪಟ್ಟ ಆರ್ಸೆಟಿ ಸಂಸ್ಥೆಗಳ 4 ರಾಜ್ಯಗಳ ನಿರ್ದೇಶಕರುಗಳು, 40 ಮಂದಿ ಉಪನ್ಯಾಸಕರುಗಳು ಭಾಗವಹಿಸಿದ್ದರು.
ರುಡ್ಸೆಟ್ ನೇಷನಲ್ ಅಕಾಡಮಿಯ ಮಹಾನಿರ್ದೇಶಕ ಎನ್. ಮಂಜುನಾಥ್ ಭಟ್ ಸ್ವಾಗತಿಸಿ ತರಬೇತಿಯ ಹಿನ್ನೋಟವನ್ನು ನೀಡಿದರು. ನಿರ್ದೇಶಕ ಗಂಗಾಧರಮೂರ್ತಿ, ಉಪನ್ಯಾಸಕ ಶಶಿಧರ ಶೆಟ್ಟಿ, ರುಡ್ಸೆಟ್ ಕೇಂದ್ರ ಕಛೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಟಿ.ಪಿ ಜಗದೀಶ್ ಮೂರ್ತಿ, ನಿರ್ದೇಶಕ ಅಜಿತ್ ಕೆ. ರಾಜಣ್ಣವರ್, ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.