ಲಕ್ನೋ : ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ” ಗುಮ್ನಾಮೀ ಬಾಬಾ” ಅವರ ಮೇಷದಲ್ಲಿ ಹಲವು ವರ್ಷಗಳ ಕಾಲ ಬದುಕಿದ್ದರು ಎಂಬುದು ಹಲವರ ನಂಬಿಕೆ. ಇಂದು ಅವರು ಗುಮ್ನಾಮೀ ಬಾಬಾ ಅವರಿಗೆ ಸೇರಲಾಗಿದೆ ಎನ್ನಲಾದ 27 ಪೆಟ್ಟಿಗೆಯಲ್ಲಿ ಕೆಲವೊಂದನ್ನು ತೆರೆಯಲಾಯಿತು.
ಒಟ್ಟು 27 ಪಟ್ಟಿಗೆಯಲ್ಲಿ ಗುಮ್ನಾಮೀ ಬಾಬಾ ಅವರ ಸಾಮಾಗ್ರಿಗಳು ಇದ್ದು ಅದನ್ನು ಸಾರ್ವಜನಿಕರ ಸಮ್ಮುಖದಲ್ಲಿ ತೆರೆಯಲು ನಿರ್ಧರಿಸಿದ್ದು ಈ ಪೈಕಿ ಕೆಲವೊಂದು ಪೆಟ್ಟಿಗೆಗಳನ್ನು ಇಂದು ತೆರಯಲಾಗಿದೆ.
ಇಂದು ತೆರದ ಪಟ್ಟಿಗೆಯಲ್ಲಿ ಎರಡನೇ ಮಹಾಯುದ್ಧದ ಕಾಲಘಟ್ಟದಲ್ಲಿ ಜರ್ಮನಿಯಿಂದ ಉತ್ಪಾದಿತವಾದ ಒಂದು ಬೈನಾಕ್ಯುಲಾರ್ ಮತ್ತು ಬ್ರಿಟಿಷರ ಕಾಲದ ಎಂಪಾಯರ್ ಕೊರೋನಾ ಕ್ಲಾಸಿಕ್ ಪೋರ್ಟಬಲ್ ಟೈಪರೈಟರ್ ಮತ್ತು ಹಳೇಕಾಲದ ಪೋರ್ಸೆಲಿನ್ ಟೀ ಸೆಟ್ ಹಾಗೂ ಅನೇಕ ಅಮೂಲ್ಯ ಪುಸ್ತಕಗಳು ಕಂಡು ಬಂದವು.
ಮುಂದಿನ ದಿನಗಳಲ್ಲಿ ಗುಮ್ನಾಮೀ ಬಾಬಾ ಅವರಿಗೆ ಸೇರಿದ ನಿಗೂಢ ವಸ್ತುಗಳಿರುವ ಉಳಿದ ಪೆಟ್ಟಿಗೆಗಳನ್ನು ತೆರೆದು ಅವುಗಳಲ್ಲಿರುವ ಅಮೂಲ್ಯ ವಸ್ತುಗಳನ್ನು ಸಂಪೂರ್ಣವಾಗಿ ದಾಖಲೀಕರಿಸಿ ಸಂರಕ್ಷಿಸಿಡಲಾಗುವುದು ಎಂದು ಮಿಶ್ರಾ ಹೇಳಿದ್ದಾರೆ. ಈ ವಸ್ತುಗಳ ವಿಡಿಯೋ ಚಿತ್ರಿಕರಣ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.