ಚೆನೈ : ಸ್ವದೇಶಿ ಮಾರ್ಗದರ್ಶಿ ವ್ಯವಸ್ಥೆಯನ್ನು ಹೊಂದಲು ಭಾರತದ 6ನೇ ಉಪಗ್ರಹವನ್ನು ಇಸ್ರೋ ಮಾರ್ಚ್ 10 ರಂದು ನಭಕ್ಕೆ ಉಡಾವಣೆಗೊಳಿಸಲಿದೆ.
ಐಆರ್ಎನ್ಎಸ್ಎಸ್ ಶ್ರೇಣಿಯ 6ನೇ ಉಪಗ್ರಹವಾದ ಐಆರ್ಎನ್ಎಸ್ಎಸ್ 1ಎಫ್ ಅನ್ನು ಚೆನೈನ ಶ್ರೀಹರಿಕೋಟಾದಿಂದ ಮಾರ್ಚ್ 10 ರಂದು ಉಡಾವಣೆಯಾಗಲಿದೆ. ಉಪಗ್ರಹವು 1425 ಕೆಜಿ ಯಷ್ಟು ಭಾರಹೊಂದಿದ್ದು, ಈ ಉಪಗ್ರಹವನ್ನು ಪಿಯಸ್ಎಲ್ವಿ ರಾಕೆಟ್ ಮೂಲಕ ಹಾರಿಸಲು ಇಸ್ರೋ ಚಿಂತಿಸಿದೆ. ಐಆರ್ಎನ್ಎಸ್ಎಸ್ ಶ್ರೇಣಿಯ 9 ಉಪಗ್ರಹಗಳನ್ನು ತಯಾರಿಸಿದ್ದು ಇದರಲ್ಲಿ ಏಳನ್ನು ಉಡಾವಣೆಗೊಳಿಸಲಿದೆ. ಇನ್ನುಳಿದ ಎರಡು ಉಪಗ್ರಹನ್ನು ತುರ್ತು ಅವಶ್ಯಕತೆಗಾಗಿ ಬಳಸಲಾಗುವುದು ಎಂದು ಇಸ್ರೋ ತಿಳಿಸಿದೆ.
ಈಗಾಗಲೇ 5 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, 2013 ರಿಂದ 2015 ರವರೆಗೆ 4 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಈ ವರ್ಷದ ಜನವರಿಯ 20 ರಂದು 5ನೇ ಉಪಗ್ರಹವನ್ನು ಉಡಾವಣೆಗೊಳಿಸಿ ಕಕ್ಷೆಗೆ ಸೇರಿಸಲಾಗಿತ್ತು. ಈ ವರ್ಷದ ಮುಧ್ಯಭಾಗದಲ್ಲಿ 7ನೇ ಉಪಗ್ರಹ ಉಡಾವಣೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.