ನವದೆಹಲಿ: ದೆಹಲಿಯಲ್ಲಿ ಲೆ.ಜ. ನಜೀಬ್ ಜಂಗ್ ಅವರು ‘Find a Toilet’ ಅಪ್ಲಿಕೇಶನ್ ಬಿಡುಗಡೆಗೊಳಿಸಿದ್ದು, ಇದು ದೆಹಲಿಯ ಜನತೆಗೆ ತಾವಿರುವ ಪ್ರದೇಶದ ಸಮೀಪವಿರುವ ಸಾರ್ವಜನಿಕ ಶೌಚಾಲಯ ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಈ ಆ್ಯಪ್ ಬಳಕೆದಾರರಿಂದ ಸಾರ್ವಜನಿಕ ಶೌಚಾಲಯಗಳ ಗುಣಮಟ್ಟದ ರೇಟಿಂಗ್ಗೆ ಸಹಾಯಕವಾಗಲಿದೆ.
ಸ್ವಚ್ಛ ಭಾರತ ಯೋಜನೆಯ ಭಾಗವಾಗಿ ಇಶಾನ್ ಆನಂದ್ ಈ ಆ್ಯಪ್ ಬಿಡುಗಡೆ ಮಾಡಿದ್ದು, ಅವರ ಈ ಕಾರ್ಯಕ್ಕೆ ಲೆ.ಜ. ಜಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೆಹಲಿಯ ಎಲ್ಲಾ ಸಾರ್ವಜನಿಕ ಶೌಚಾಲಯಗಳು ಹಾಗೂ ಇದರ ಸೇವೆಗಳನ್ನು ಈ ಆ್ಯಪ್ನಲ್ಲಿ ಅಪ್ಗ್ರೇಡ್ ಮಾಡುವಂತೆ ದೆಹಲಿಯ ಮೂರು ಪುರಸಭೆಗಳು ಮತ್ತು ಡಿ.ಡಿ.ಎ.ಗೆ ಜಂಗ್ ಮನವಿ ಮಾಡಿದ್ದಾರೆ.
ಈ ಆ್ಯಪ್ ದೆಹಲಿಯ 1000 (ಶೇ.80) ಶೌಚಾಲಯಗಳ ಸ್ಥಳ ಮತ್ತು ಮಾಹಿತಿಯನ್ನು ನೀಡುತ್ತದೆ. ಈ ಮೊಬೈಲ್ ಆ್ಯಪ್ ಜಿಪಿಎಸ್ ಮೂಲಕ ಸಮೀಪದ ಸಾರ್ವಜನಿಕ ಶೌಚಾಲಯ ಪತ್ತೆ ಹಚ್ಚುತ್ತದೆ. ಬಳಿಕ ಅಲ್ಲಿಗೆ ತಲುಪಲು ನಿಖರವಾದ ಮಾರ್ಗವನ್ನು ಸೂಚಿಸುತ್ತದೆ ಎಂದು ಆನಂದ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.