ನವದೆಹಲಿ: ಉದ್ಯಮ ವಲಯದಲ್ಲಿ ಅತೀ ಕಡಿಮೆ ಮಹಿಳಾ ನಾಯಕತ್ವವನ್ನು ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ ಕೂಡ ನಿಂತಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗ್ರಾಂಟ್ ತೊರ್ನ್ಟೋನ್ ನಡೆಸಿದ ಅಧ್ಯಯನದಲ್ಲಿ ಭಾರತ ಮೂರನೇ ಅತೀ ಕಡಿಮೆ ಸ್ಥಾನದಲ್ಲಿದೆ. ಸಮೀಕ್ಷೆಗೊಳಪಟ್ಟ ಶೇ.34ರಷ್ಟು ಉದ್ಯಮಗಳ ಉನ್ನತ ಸ್ಥಾನದಲ್ಲಿ ಮಹಿಳೆಯರೇ ಇಲ್ಲ.
ನಾಯಕತ್ವದಲ್ಲಿ ವಿಭಿನ್ನತೆ ಬೇಕು ಎಂಬುದನ್ನು ಉದ್ಯಮ ವಲಯ ಅರ್ಥೈಸಿಕೊಂಡಿದೆ ಮತ್ತು ಅರ್ಹತೆಗೆ ಬದ್ಧವಾಗಿದೆ. ಆದರೆ ಉದ್ಯಮ ವಲಯ ಹೇಳುವುದಕ್ಕೂ, ಅವರ ವರ್ತನೆಗೂ ತಾಳೆಯೇ ಇಲ್ಲ ಎಂದು ಅಧ್ಯಯನ ಹೇಳಿದೆ.
36 ದೇಶಗಳ 5,520 ಉದ್ಯಮಗಳನ್ನು ಸಮೀಕ್ಷೆಗೊಳಪಡಿಸಿ ಈ ವರದಿಯನ್ನು ರಚಿಸಲಾಗಿದೆ. ಕಳೆದ ದಶಕದಿಮದ ಮಹಿಳಾ ನಾಯಕತ್ವದಲ್ಲಿ ಏರಿಕೆಯಾಗುತ್ತಿದೆ ಎಂಬ ಅಂಶವನ್ನು ಈ ವರದಿ ತಿಳಿಸಿದೆ.
ಪೂರ್ವ ಯುರೋಪಿಯನ್ ದೇಶಗಳು ಮಹಿಳಾ ನಾಯಕತ್ವದಲ್ಲಿ ಮುಂದಿವೆ ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.