ನವದೆಹಲಿ: ಉತ್ತರಪ್ರದೇಶದ ಖಾನ್ಪುರದ ಸಂದೀಪ್ ಸೋನಿ ಹಲವು ದಿನಗಳಿಂದ ಕಾಣುತ್ತಿದ್ದ ಕನಸು ಕೊನೆಗೂ ನನಸಾಗಿದೆ. ಅವರು ಮರದ ಮೇಲೆ ಕೆತ್ತಿದ ಭಗವದ್ಗೀತೆಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದು, ಪ್ರಶಂಸೆಗೆ ಪಾತ್ರವಾಗಿದೆ.
ನ್ಯೂಸ್ ಪೇಪರ್ ಮಾರಾಟಗಾರ ಮತ್ತು ಕಾರ್ಪೆಂಟರ್ ಆಗಿರುವ ಸೋನಿ ತಾವು ಮರದಿಂದ ರಚಿಸಿದ ವಿಶೇಷ ಭಗವದ್ಗೀತೆಯನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಈ ಅಪೂರ್ವ ಉಡುಗೊರೆಯನ್ನು ಮೋದಿ ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ಸಂದೀಪ್ ಸೋನಿ ಮರದಲ್ಲಿ ಕೆತ್ತಿದ ಗೀತೆಯ ಪ್ರತಿಯನ್ನು ನನಗೆ ಉಡುಗೊರೆಯಾಗಿ ನೀಡಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ.
ಸೋನಿ ಮರದ ಮೇಲೆ ಗೀತೆಯ ಶ್ಲೋಕ ಕೆತ್ತಲು ಸುಮಾರು 4 ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಇದನ್ನು ಪ್ರಧಾನಿಯವರಿಗೆ ನೀಡಬೇಕೆಂಬುದು ಅವರ ಹೆಬ್ಬಯಕೆಯಾಗಿತ್ತು, ಅದರಂತೆ ದೆಹಲಿ ಆಗಮಿಸಿ ಈ ಉಡುಗೊರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.