ಕಣ್ಣೂರು: ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲಿನ ಹಲ್ಲೆ ಕೇರಳದಲ್ಲಿ ಮುಂದುವರೆದಿದೆ. ಮಂಗಳವಾರ ಹಾಡು ಹಗಲೇ ಆರ್ಎಸ್ಎಸ್ ಕಾರ್ಯಕರ್ತನನ್ನು ಆತನ ಆಟೋರಿಕ್ಷಾದಿಂದ ಹೊರಕ್ಕೆ ಎಳೆದು ಚೂರಿ ಹಾಕಲಾಗಿದೆ.
ತನ್ನ ಆಟೋದಲ್ಲಿ ಶಾಲಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಎ.ವಿ.ಬಿಜು ಎಂಬುವವರನ್ನು ಹೊರಕ್ಕೆ ಎಳೆದು ಮಕ್ಕಳ ಮುಂದೆಯೇ ಅವರ ಮೇಲೆ 6 ಮಂದಿ ಸಿಪಿಎಂ ಕಾರ್ಯಕರ್ತರು ಚೂರಿಯಿಂದ ಹಲ್ಲೆ ಮಾಡಿದ್ದಾರೆ.
ತಲಸ್ಸೆರಿಯ ಪಣ್ಣುರು ಬಳಿ ಈ ಘಟನೆ ನಡೆದಿದೆ, ಗಂಭಿರ ಗಾಯಗೊಂಡಿರುವ ಬಿಜು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಕುಟುಂಬ ಸದಸ್ಯರ ಮುಂದೆಯೇ ಆರ್ಎಸ್ಎಸ್ ಕಾರ್ಯಕರ್ತರೊಬ್ಬರನ್ನು ಸಿಪಿಎಂ ಗೂಂಡಾಗಳು ಕೊಲೆ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.