ನವದೆಹಲಿ: 2016ನೇ ವರ್ಷದ ಮೊದಲ ಸೂರ್ಯಗ್ರಹಣ ಮಾ.9ರ ಬುಧವಾರ ಸಂಭವಿಸಲಿದೆ. ಈ ವೇಳೆ ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಹಾದು ಹೋಗಲಿದ್ದಾನೆ. ಹೀಗಾಗಿ ಸೂರ್ಯನಿಗೆ ಕೆಲ ಹೊತ್ತು ಕತ್ತಲು ಕವಿಯಲಿದೆ.
ಭಾರತದಲ್ಲಿ ಗ್ರಹಣದ ವೇಳೆ ಊಟ, ತಿಂಡಿ ಬಿಟ್ಟು ಉಪವಾಸ ಇರುವುದು ವಾಡಿಕೆ. ಈ ವೇಳೆ ಬೀಳುವ ಸೂರ್ಯ ಕಿರಣಗಳು ಆರೋಗ್ಯ ಸಂಬಂಧಿ ಸಮಸ್ಯೆಯನ್ನು ಉಂಟು ಮಾಡಬಹುದು ಎಂಬ ಕಾರಣಕೆ ಗರ್ಭಿಣಿ ಸ್ತ್ರೀಯರಿಗೆ ಮನೆಯೊಳಗೆ ಇರುವಂತೆ ಹಿರಿಯರು ಸೂಚಿಸುತ್ತಾರೆ.
ಭಾರತದಲ್ಲಿ ಭಾಗಶಃ ಸೂರ್ಯಗ್ರಹಣ ಮಾತ್ರ ಕಾಣಲಿದೆ.
ಬೆಳಿಗ್ಗೆ 5:38:25ರಿಂದ ಆರಂಭವಾಗಿ 6:50:43ರವರೆಗೆ ಇದು ಇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.