ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಂತಕಿ ನಳಿನಿ ಶ್ರೀಹರನ್ ಅವರಿಗೆ ತಂದೆಯ 16ನೇ ದಿನದ ತಿಥಿಯಲ್ಲಿ ಭಾಗವಹಿಸುವ ನಿಮಿತ್ತ ಮಂಗಳವಾರ ಮದ್ರಾಸ್ ಹೈಕೋರ್ಟ್ ಒಂದು ದಿನ ಪೆರೋಲ್ ನೀಡಿದೆ.
ತಂದೆಯ ತಿಥಿಯಲ್ಲಿ ಭಾಗವಹಿಸಲು ತನಗೆ 3 ದಿನಗಳ ಪೆರೋಲ್ ನೀಡಬೇಕೆಂದು ಕೋರಿ ನಳಿನಿ ಪಿಟಿಷನ್ ಸಲ್ಲಿಕೆ ಮಾಡಿದ್ದರು. ಅದರ ವಿಚಾರಣೆ ನಡೆಸಿದ ಹೈಕೋರ್ಟ್ 1 ದಿನದ ಪೆರೋಲ್ ನೀಡಿದೆ.
ಕೊಟ್ಟುರಿನಲ್ಲಿ ಬುಧವಾರ ಅವರ ತಂದೆಯ 16ನೇ ದಿನದ ತಿಥಿ ನಡೆಯಲಿದೆ, ಫೆಬ್ರವರಿಯಲ್ಲಿ ಅವರ ತಂದೆ ನಿಧನರಾಗಿದ್ದರು.
ಮಂಗಳವಾರ 4 ಗಂಟೆಯಿಂದ ಬುಧವಾರ 4 ಗಂಟೆಯವರೆಗೆ ಪೆರೋಲ್ ಅನ್ವಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.