ಪಾಟ್ನಾ: ಕೊಲೆ ಅಪರಾಧದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಕ್ರಿಮಿನಲ್ ಜೊತೆ ಜೈಲಿನೊಳಗೆ ಕೂತು ಹಬ್ಬದೂಟ ಮಾಡುತ್ತಿದ್ದ ಬಿಹಾರ ಸಚಿವರೊಬ್ಬರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಹಾರದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಅಬ್ದುಲ್ ಗಫೂರ್, ಮತ್ತೊಬ್ಬ ಶಾಸಕ ಕೊಲೆ ಅಪರಾಧಿ ಮೊಹಮ್ಮದ್ ಸಹಬುದ್ದೀನ್ನನ್ನು ಜೈಲಿನೊಳಗೆ ಭೇಟಿಯಾಗಿ, ಆತನೊಂದಿಗೆ ಊಟ ಮಾಡಿದ್ದಾರೆ, ಮಾ.6 ರಂದು ಈ ಘಟನೆ ನಡೆದಿದೆ.
ಸಹಬುದ್ದೀನ್ ಕ್ರಿಮಿನಲ್ ಟರ್ನ್ಡ್ ರಾಜಕಾರಣಿಯಾಗಿದ್ದು, ಪ್ರಸ್ತುತ ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಕಂಬಿಗಳ ಹಿಂದಿದ್ದಾನೆ.
ಗಫೂರ್ ಮಾತ್ರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಇದೊಂದು ಔಪಚಾರಿಕ ಭೇಟಿಯಷ್ಟೇ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.