ಬೆಂಗಳೂರು : ಶಿವರಾತ್ರಿ ಪ್ರಯುಕ್ತ ತುಮಕೂರಿನ ಎತ್ತೇನಹಳ್ಳಿಯಲ್ಲಿ ಜಾತ್ರೆಯಲ್ಲಿ ಕೆಂಡ ಹಾಯುತ್ತಿರುವ ಕುಂಡಕ್ಕೆ ಆಯತ್ತಪ್ಪಿ ಬಾಲಕ ಬಿದ್ದಿದ್ದು, ಆತನ ರಕ್ಷಣೆಗೆ ಮುಂದಾದ ಜನಜಂಗಳಿಯಿಂದ 60 ತಕ್ಕೂ ಅಧಿಕ ಮಂದಿಗೆ ಗಾಯವಾಗಿ ಆಸ್ಪತ್ರೆಗೆ ಸೇರಿದ್ದಾರೆ.
ಪ್ರತಿವರ್ಷದಂತೆ ಶಿವರಾತ್ರಿ ಪ್ರಯುಕ್ತ ತುಮಕೂರಿನ ಎತ್ತೇನಹಳ್ಳಿಯಲ್ಲಿ ಜಾತ್ರೆಯ ನಡೆಯುತ್ತಿದ್ದು , ಈ ಸಂದರ್ಭದಲ್ಲಿ ಇಲ್ಲಿ ಕೆಂಡ ಹಾಯುವುದು ಪ್ರತೀತಿ.
ಇದಕ್ಕಾಗಿ ಸುತ್ತಲ ಗ್ರಾಮಗಳಿಂದ ಜನರು ಆಗಮಿಸಿದ್ದು, ಜನರು ಕೆಂಡ ಹಾಯಲು ಕಾರ್ಯದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಹುಡುಗನೊಬ್ಬ ಆಯತಪ್ಪಿ ಕೆಂಡದ ಕುಂಡಕ್ಕೆ ಬಿದಿದ್ದು, ಆತನ ರಕ್ಷಣೆಗಾಗಿ ಜನರು ಮುಂದಾಗಿದ್ದಾರೆ.ಇದರಿಂದ ಜನಜಂಗುಳಿ ಹೆಚ್ಚಾಗಿದು ಒಬ್ಬರಮೇಲ್ಲೊಬ್ಬರಂತೆ ಬಿದ್ದು, ೬೦ತ್ತೂ ಅಧಿಕ ಮಂದಿಗೆ ಗಾಯಗಳಾಗಿವೆ.
ಗಂಭೀರವಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಕರೆತಂದಿದ್ದು ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.