ನವದೆಹಲಿ: ಅಮೆಜಾನ್ ಭಾರತದ ಅತ್ಯಂತ ವಿಶ್ವಾಸಾರ್ಹ ಆನ್ಲೈನ್ ಶಾಪಿಂಗ್ ಬ್ರ್ಯಾಂಡ್ ಎಂದು TRA ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಬ್ರ್ಯಾಂಡ್ ಟ್ರಸ್ಟ್ ಇಂಡಿಯಾ ಸ್ಟಡಿ 2016 ಬಿಡುಗಡೆ ಮಾಡಿದ ವಾರ್ಷಿಕ ವರದಿಯಲ್ಲಿ ಸ್ನಾಪ್ಡೀಲ್ ಹಾಗೂ ಫ್ಲಿಪ್ಕಾರ್ಟ್ ಅಮೆಜಾನ್ ನಂತರದ ಸ್ಥಾನದಲ್ಲಿವೆ ಎಂದು TRA ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಚಂದ್ರಮೌಳಿ ಹೇಳಿದ್ದಾರೆ.
ಈಬೇ (Ebay), ಮಿಂತ್ರಾ (Myntra), ಯೆಪ್ಮೆ (Yepme), ನ್ಯಾಪ್ಟೋಲ್ (Naaptol), ಜಬಾಂಗ್ (Jabong), ಆಸ್ಕ್ಮೀಬಜಾರ್ (Askmebazaar) ಕೂಡ ಭಾರತದ ಅಗ್ರ ವಿಶ್ವಾಸಾರ್ಹ ಆನ್ಲೈನ್ ಶಾಪಿಂಗ್ ಬ್ರ್ಯಾಂಡ್ಗಳಲ್ಲಿ ಕಾಣಿಸಿಕೊಂಡಿವೆ.
ಅಮೆಜಾನ್ ಯುವಜನಾಂಗದ ವಿಶ್ವಾಸಾರ್ಹ ಇ-ವಾಣಿಜ್ಯ ಶಾಪಿಂಗ್ ತಾಣವಾಗಿದ್ದು, ಜನರ ವಿಶ್ವಾಸಾರ್ಹತೆಯಲ್ಲಿ ಇದರ ಪಾಲು ಶೇ.36ರಷ್ಟಿದೆ. ಫ್ಲಿಪ್ಕಾರ್ಟ್ ಹಾಗೂ ಸ್ನ್ಯಾಪ್ಡೀಲ್ ಪಾಲು ಶೇ.40 ಇದ್ದರೆ ಈ ಮೂರು ಕಂಪೆನಿಗಳ ಒಟ್ಟಾರೆ ಆನ್ಲೈನ್ ಶಾಪಿಂಗ್ ಮಾರುಕಟ್ಟೆ ಹಂಚಿಕೆ ಶೇ.76 ಆಗಿದೆ.
ಸ್ಮಾರ್ಟ್ಫೋನ್ ಹೊರತುಪಡಿಸಿ ಇತರ ಯಾವುದೇ ಉತ್ಪನ್ನಗಳನ್ನು ನಿಗದಿತ ದಿನಾಂಕದೊಳಗೆ ಮರಳಿಸುವ ಅವಕಾಶವನ್ನು ಅಮೆಜಾನ್ ನೀಡಿದೆ. ಸ್ನ್ಯಾಪ್ಡೀಲ್ ತನ್ನ ನೀತಿಯಲ್ಲಿ ಉತ್ಪನ್ನಗಳನ್ನು 7 ದಿನಗಳೊಳಗೆ ಮರಳಿಸುವ ಅವಕಾಶ ಕಲ್ಪಿಸಿದೆ.
ಫ್ಲಿಪ್ಕಾರ್ಟ್ ನಿರ್ದಿಷ್ಟ ವಸ್ತುಗಳಿಗೆ ನಿರ್ದಿಷ್ಟ ಸಮಯಗಳಲ್ಲಿ ಮಾತ್ರ 30 ದಿನಗಳ ಒಳಗಾಗಿ ಉತ್ಪನ್ನಗಳನ್ನು ಬದಲಾಯಿಸುವ ಮತ್ತು ಹಣ ಹಿಂಪಡೆವ ಅಕವಾಶ ಕಲ್ಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.