ಬೆಳ್ತಂಗಡಿ: ಮರೋಡಿಯ ಭಾಗ್ಯಶ್ರೀ ಅಸಹಜ ಸಾವಿನ ಪ್ರಕರಣದ ಬಗ್ಗೆ ಹಾಗು ಬೆಳಾಲು ಗ್ರಾಮದ ಶೋಭಿತಾ ಅಸಹಜ ಸಾವಿನ ಪ್ರಕರಣದ ಬಗ್ಗೆ ಪೋಲೀಸ್ ಇಲಾಖೆ ಸಮಗ್ರವಾದ ತನಿಖೆಯನ್ನು ನಡೆಸಿ ಈ ಪ್ರಕರಣಗಳ ಹಿಂದೆ ಯಾರದೇ ಕೈವಾಡವಿದ್ದರೂ ಅದನ್ನುಬಹಿರಂಗ ಪಡಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಒತ್ತಾಯಿಸಿದ್ದಾರೆ.
ಅವರು ಬೆಳ್ತಂಗಡಿಯಲ್ಲಿ ssಸೋಮವಾರಪತ್ರಿಕಾ ಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು. ಭಾಗ್ಯಶ್ರೀ ಸಾವಿನ ಬಗ್ಗೆ ಸ್ಧಳೀಯವಾಗಿ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದು ಇದೊಂದು ಕೊಲೆ ಪ್ರಕರಣ ಎಂಬ ಅನುಮಾನವು ಕೇಳಿ ಬರುತ್ತಿದೆ ಪ್ರಕರಣದ ಬಗ್ಗೆ ಸರಿಯಾದ ತನಿಖೆ ನಡೆಯಬೇಕಾಗಿದೆ. ಪ್ರತಿಭಾವಂತ ವಿಧ್ಯಾರ್ಧಿನಿಯಗಿದ್ದ ಈಕೆ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವ ತೀರಾ ಕಡಿಮೆ ಎಂಬುದು ಅವಳನ್ನು ಬಲ್ಲವರ ಅಭಿಪ್ರಾಯವಾಗಿದೆ ತನಿಖಾಧಿಕಾರಿಗಳು ಇದನ್ನು ಗಣನೆಗೆ ತೆಗೆದುಕೊಂಡು ತನಿಖೆ ನಡೆಸಬೇಕಾಗಿದೆ. ಅದೇ ರೀತಿ ಬೆಳಾಲಿನ ವಿಧ್ಯಾರ್ಥಿನಿ ಶೋಭಿತಾಳ ಅಸಹಜ ಸಾವಿನ ಪ್ರಕರಣ ನಡೆದು ಆರು ತಿಂಗಳಾದರು ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿರುವುದು ಕಂಡು ಬರುವುದಿಲ್ಲ ಈ ಪ್ರಕರಣದಲ್ಲಿಯು ಕೂಡಲೆ ಸರಿಯಾದ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.
ವಿದ್ಯರ್ಥಿನಿಯರ ಅಸಹಜ ಸಾವಿನ ಪ್ರಕರಣಗಳು ತಾಲೂಕಿನ ಜನರಲ್ಲಿ ಆತಂಕ ಮೂಡಿಸಿದ್ದು ಪ್ರಕರಣಗಳ ತನಿಖೆಯನ್ನು ಸರಿಯಾದ ರೀತಿಯಲ್ಲಿ ನಡೆಸಿ ಆರೋಪಿಗಳನ್ನು ಶಿಕ್ಷಿಸುವ ಕಾರ್ಯ ಆಗಬೇಕಾಗಿದೆ ಹಿರಿಯ ಪೋಲೀಸ್ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಅದೇ ರೀತಿ ಮೃತಪಟ್ಟ ವಿದ್ಯಾರ್ಥಿನಿಯರ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಉಪಾದ್ಯಕ್ಷೆ ಸುಜಿತಾ ವಿ ಬಂಗೇರ, ಕಾರ್ಯದರ್ಶಿ ಪದ್ಮನಾಭ ಸಾಲಿಯಾನ್, ಕೋಶಾಧಿಕಾರಿ ನಿತ್ಯಾನಂದ ನಾವರ, ತನುಜ ಶೇಖರ್, ಸಂತೋಷ್ ಕಪಿನಡ್ಕ, ಚಿದಾನಂದ ಇಡ್ಯ,ಮತ್ತಿತರರು ಉಪಸ್ದಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.