ನವದೆಹಲಿ: ದೇಶದ ಅಭಿವೃದ್ಧಿಗಾಗಿ ಮಹಿಳೆಯರನ್ನು ಸಬಲೀಕರಣ ಮಾಡುವ ಅಗತ್ಯತೆಯನ್ನು ಪ್ರಧಾನಿ ನರೇಂದ್ರ ಮೋದಿ ಸಾರಿದ್ದು, ನಾಗರಿಕರಿಂದ ದೇಶ, ತಾಯಂದಿರಿಂದ ನಾಗರಿಕರು ಬಲಿಷ್ಠರಾಗುತ್ತಾರೆ ಎಂದಿದ್ದಾರೆ.
ಭಾನುವಾರ ನವದೆಹಲಿಯಲ್ಲಿ ನಡೆದ ಮಹಿಳಾ ಶಾಸಕಿಯರ ರಾಷ್ಟ್ರೀಯ ಕಾನ್ಫರೆನ್ಸ್ನ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಬಲಿಷ್ಠತೆಗಾಗಿ ಮಹಿಳೆ ಬಲಿಷ್ಠಳಾಗಬೇಕು ಎಂದಿದ್ದಾರೆ.
ಮೂಲಭೂತ ಸೌಕರ್ಯ, ರಸ್ತೆ, ಬಜೆಟ್ನಿಂದ ಮಾತ್ರ ದೇಶವನ್ನು ಬಲಗೊಳಿಸಲು ಸಾಧ್ಯವಿಲ್ಲ, ನಾಗರಿಕರು ಮತ್ತು ತಾಯಂದಿರು ದೇಶವನ್ನು ಬಲಿಷ್ಠಗೊಳಿಸುತ್ತಾರೆ. ತನ್ನ ಮನೆ ಹೇಗೆ ಕಾಣಬೇಕೆಂಬುದನ್ನು ನಿರ್ಧರಿಸುವವಳು ಮಹಿಳೆ, ಇದೇ ರೀತಿ ಆಕೆ ದೇಶಕ್ಕೂ ಕೊಡುಗೆಯನ್ನು ನೀಡಬೇಕು ಎಂದರು.
ತಂತ್ರಜ್ಞಾನ ವ್ಯಕ್ತಿಯ ಬದುಕಲ್ಲಿ ಮಹತ್ವದ ಪಾತ್ರ ನಿಭಾಯಿಸುತ್ತದೆ, ತಂತ್ರಜ್ಞಾನವನ್ನು ಅಳವಡಿಸಲು ಮಹಿಳೆ ಹೆಚ್ಚು ಉತ್ಸುಕಳಾಗಿದ್ದಾಳೆ. ಮಹಿಳಾ ಸಬಲೀಕರಣದ ಬಗ್ಗೆ ಸಮಾಜದ ಮನಸ್ಥಿತಿ ಬದಲಾಗಬೇಕಿದೆ, ಸಬಲರಾಗದವರನ್ನು ಸಬಲೀಕರಣ ಮಾಡಬೇಕಿದೆಯೇ ಹೊರತು ಈಗಾಗಲೇ ಸಬಲರಾಗಿರುವವರನ್ನು, ಬಲಿಷ್ಠರಾಗಿರುವವರನ್ನಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.