ನವದೆಹಲಿ: ದೇಶದ್ರೋಹ ಆರೋಪದ ಮೇಲೆ ಬಂಧಿತನಾಗಿ ಇದೀಗ ಬಿಡುಗಡೆಯಾಗಿರುವ ಜೆಎನ್ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಶೂಟ್ ಮಾಡಿದವರಿಗೆ 11 ಲಕ್ಷ ರೂಪಾಯಿ ಇನಾಮು ನೀಡಲಾಗುವುದು ಎಂದು ಬರೆದ ಭಿತ್ತಿ ಪತ್ರಗಳು ದೆಹಲಿಯಲ್ಲಿ ಹಲವೆಡೆ ಕಂಡು ಬಂದಿದೆ.
ದೇಶದ್ರೋಹಿ ಕನ್ಹಯ್ಯ ಕುಮಾರ್ನನ್ನು ಶೂಟ್ ಮಾಡುವ ವ್ಯಕ್ತಿಗೆ ಪೂರ್ವಾಂಚಲ ಸೇನೆ 11 ಲಕ್ಷ ರೂ. ಇನಾಮು ನೀಡಲಿದೆ’ ಎಂದು ಈ ಪೋಸ್ಟರ್ಗಳಲ್ಲಿ ಹಿಂದಿ ಭಾಷೆಯಲ್ಲಿ ಬರೆಯಲಾಗಿದೆ.
ದೇಶ ವಿರೋಧಿ ಘೋಷಣೆ ಕೂಗಿ ಭಾರತ ಮಾತೆಗೆ ಅವಮಾನಿಸಿದ ಕನ್ಹಯ್ಯ ಹತನಾಗುವುದನ್ನು ನಾವು ಬಯಸುತ್ತೇವೆ. ನಮಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ. ಆದರೆ ತ್ವರಿತವಾಗಿ ತೀರ್ಪುಗಳನ್ನು ನೀಡುತ್ತಿಲ್ಲ. ಆದ್ದರಿಂದ ಕನ್ಹಯ್ಯ ಹತ್ಯೆಯಾಗುವುದನ್ನು ಬಯಸುತ್ತೇವೆ ಎಂದು ಉತ್ತರ ಪ್ರದೇಶ ಮತ್ತು ಬಿಹಾರದ ಜನರಿಗಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಪೂರ್ವಾಂಚಲ ಸೇನೆ ಅಧ್ಯಕ್ಷನ ಪುತ್ರ ಆದರ್ಶ ಶರ್ಮಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.