ಒಟ್ಟಾವ: ಕೆನಡಾದಲ್ಲಿದ್ದ ಖಜುರಾಹೋ ದೇಗುಲದ ಸುಮಾರು 900 ವರ್ಷಗಳ ಹಳೆಯ ಶಿಲ್ಪಾಕೃತಿಯೊಂದನ್ನು ಅಲ್ಲಿನ ಪ್ರಧಾನಿ ಸ್ಟೀಫನ್ ಹರ್ಪರ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಸ್ತಾಂತರ ಮಾಡಿದ್ದಾರೆ.
ಈ ಶಿಲ್ಪಾಕೃತಿಯನ್ನು ‘ಪ್ಯಾರೋಟ್ ಲೇಡಿ’ (ಪಾರಿವಾಳದ ಹೆಣ್ಣು) ಎಂದು ಕರೆಯಲಾಗಿದೆ. 1970ರ ಯುನೆಸ್ಕೋ ಒಡಂಬಡಿಕೆಯ ಅಂಗವಾಗಿ ಇದನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ. ಕೆನಡಿಯನ್ ಪಾರ್ಲಿಮೆಂಟ್ ಲೈಬ್ರರಿಗೆ ಬುಧವಾರ ಮೋದಿ ಭೇಟಿ ನೀಡಿದ ಸಂದರ್ಭ ಹಾರ್ಪರ್ ಅವರು ಇದನ್ನು ಹಸ್ತಾಂತರ ಮಾಡಿದರು.
ಖಜುರಾಹೋ ದೇಗುಲ ಯುನೆಸ್ಕೋದ ಸಂರಕ್ಷಣೆಯಲ್ಲಿದೆ. ಹೆಣ್ಣೊಬ್ಬಳು ನೃತ್ಯ ಮಾಡುತ್ತಿದ್ದು ಆಕೆಯ ಹಿಂಬದಿಯಲ್ಲಿ ಪಾರಿವಾಳ ಇರುವ ಭಂಗಿಯಲ್ಲಿ ಈ ಕಲಾಕೃತಿ ಇದೆ.
ಈ 2011ರಲ್ಲಿ ಕೆನಡಾದಲ್ಲಿ ವ್ಯಕ್ತಿಯೊಬ್ಬನ ಬಳಿ ಇದು ಪತ್ತೆಯಾಗಿತ್ತು, ಇದಕ್ಕೆ ಬೇಕಾದ ದಾಖಲೆಗಳು ಆತನ ಬಳಿ ಇಲ್ಲದ ಕಾರಣ ಅದನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಕೆನಡಿಯನ್ ಭಾರತವನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು. ಅದಾದ ಮೇಲೆ ಅದನ್ನು ಭಾರತಕ್ಕೆ ಹಿಂದಿರುಗಿಸುವ ಮಾತುಕತೆಗಳು ನಡೆದಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.