ನವದೆಹಲಿ: ಈ ಬಾರಿಯ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ ’ಮೇಲಿನ ಯಾವುದೂ ಅಲ್ಲ’ (None of the Above, NOTA) ಆಯ್ಕೆಗೆ ಚಿನ್ಹೆಯನ್ನು ನಮೂದಿಸಲಾಗಿದೆ.
ಮುಂಬರುವ ನಾಲ್ಕು ರಾಜ್ಯಗಳ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಈ ವಿಶೇಷ ಆಯ್ಕೆ ಚಿನ್ಹೆಯನ್ನು ಮೊದಲ ಬಾರಿಗೆ ಬಳಸಲಾಗುತ್ತಿದೆ.
ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಈ ಚಿನ್ಹೆಯನ್ನು ತಯಾರಿಸಿದ್ದು, ಅಭ್ಯರ್ಥಿಗಳ ಪಟ್ಟಿಯ ಕೊನೆಯಲ್ಲಿ ಈ ಚಿನ್ಹೆಯನ್ನು ನಮೂದಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ ಹೇಳಿದ್ದಾರೆ.
ಈ ಚಿನ್ಹೆಯು ಅಸಮ್ಮತಿಯನ್ನು ಸೂಚಿಸುವ ಸಾರ್ವತ್ರಿಕ ಚಿನ್ಹೆಯಾಗಿದ್ದು, ಇದು ಸುಲಭವಾಗಿ ಗುರುತಿಸಿಕೊಳ್ಳಲು ಹಾಗೂ ನೆನಪಿಡಲು ಸಹಾಯಕವಾಗಿದೆ. ಎಲ್ಲಾ ಮತಯಂತ್ರಗಳ ಕೊನೆಯಲ್ಲಿ NOTA ಬದಲಾಗಿ ಈ ಚಿನ್ಹೆಯುಳ್ಳ ಬಟನ್ ಅನ್ನು ಬಳಸಲಾಗುವುದು.
2013ರಲ್ಲಿ ಸುಪ್ರೀಂ ಕೋರ್ಟ್ NOTAಗೆ ಪ್ರತ್ಯೇಕ ಚಿನ್ಹೆ ರೂಪಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.