ನವದೆಹಲಿ: ಕೇಂದ್ರ ಸರ್ಕಾರವು 530 ವಿವಿಧ ಅವಶ್ಯಕ ಔಷಧಗಳಿಗೆ ನಿರ್ದಿಷ್ಟ ಬೆಲೆಯನ್ನು ನಿಗದಿಪಡಿಸಿದೆ. ಈ ಔಷಧಗಳ ಪೈಕಿ 126 ಔಷಧಗಳ ಬೆಲೆಯಲ್ಲಿ ಶೇ.40ರಷ್ಟು ಕಡಿತಗೊಳಿಸಲಾಗಿದೆ ಎಂದು ಸಂಸತ್ನಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಔಷಧಗಳ ಬೆಲೆ ಪ್ರಾಧಿಕಾರವು DPCO 2013 ನಿಗದಿತ ವರ್ಗದ ಅಡಿಯಲ್ಲಿ 680 ಔಷಧಗಳಲ್ಲಿ (628 ನಿವ್ವಳ ಔಷಧಿಗಳು) 530 ಔಷಧಗಳಿಗೆ ನಿರ್ದಿಷ್ಟ ಬೆಲೆ ನಿಗದಿ ಮಾಡಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಹಂಸರಾಜ್ ಗಂಗಾರಾಮ್ ಆಹಿರ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
530 ವಿವಿಧ ಔಷಧಗಳಲ್ಲಿ 126 ಔಷಧಗಳ ಶೇ.40, 34 ಔಷಧಗಳ ಶೇ. 35-40, 26 ಔಷಧಿಗಳಿಗೆ ಶೇ.30-35, 49 ಔಷಧಗಳ ಬೆಲೆಯಲ್ಲಿ ಶೇ.25-30 ಇಳಿಕೆಯಾಗಿದೆ ಎಂದು ಹಂಸರಾಜ್ ಹೇಳಿದ್ದಾರೆ.
ಇನ್ನುಳಿದಂತೆ 65 ಔಷಧಗಳ ಬೆಲೆಯಲ್ಲಿ ಶೇ. 20-25, 43 ಔಷಧಗಳಿಗೆ ಶೇ. 15-20, 57 ಔಷಧಗಳಿಗೆ ಶೇ. 10-15, 50 ಔಷಧಗಳಿಗೆ ಶೇ. 5-10 ಹಾಗೂ 80 ಔಷಧಗಳಿಗೆ ಶೇ.5ರಷ್ಟು ಬೆಲೆ ಇಳಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.