ನವದೆಹಲಿ: ಅಮೇರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ವೀಸಾವನ್ನು ಭಾರತ ಸರ್ಕಾರ ನಿರಾಕರಿಸಿದೆ. ಭಾರತದ ರಾಯಭಾರಿ ಕಚೇರಿ ನೆರವಿನೊಂದಿಗೆ ಈ ಆಯೋಗವು ಮಾ. 4 ರಂದು ಭಾರತಕ್ಕೆ ಹೊರಡಬೇಕೆಂದು ನಿಶ್ಚಯವಾಗಿತ್ತು.
ಪಾಕಿಸ್ಥಾನ, ಮ್ಯಾನ್ಮಾರ್, ಚೀನಾ, ಸೌದಿ ಅರೇಬಿಯಾ ರಾಷ್ಟ್ರಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ಪಾಲಿಸದೆ ಇದ್ದರೂ ಈ ರಾಷ್ಟ್ರಗಳಿಗೆ ಭೇಟಿ ನೀಡಲು ಸಾಧ್ಯವಾಗಿದೆ. ಆದರೆ ಅಮೇರಿಕದ ನಿಕಟವರ್ತಿಯಾಗಿರುವ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಪಾಲಿಸುತ್ತಿದ್ದರೂ ನಮ್ಮ ಭೇಟಿಗೆ ಅನುಮತಿ ನೀಡದಿರುವುದು ನಿರಾಸೆಯಾಗಿದೆ ಎಂದು ಯುಎಸ್ ಸಿಐಆರ್ಎಫ್ ಅಧ್ಯಕ್ಷ ರಾಬರ್ಟ್ ಜಾರ್ಜ್ ಹೇಳಿದ್ದಾರೆ.
ಈ ಘಟನೆ ಕುರಿತು ಅಮೇರಿಕಾದಲ್ಲಿರುವ ಭಾರತದ ರಾಯಭಾರಿ ಕಛೇರಿ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ. ಭಾರತ ಸರ್ಕಾರ ತನ್ನ ನಿಲುವುಗಳನ್ನು ಯುಎಸ್ ಸಿಐಆರ್ಎಫ್ ಗೆ ನೇರವಾಗಿ ತಿಳಿಸುವುದು ಒಳ್ಳೆಯದು ಎಂದು ರಾಬರ್ಟ್ ಜಾರ್ಜ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.