ಬೆಂಗಳೂರು: ಭಾರೀ ಜನಪ್ರಿಯತೆಯನ್ನು ಗಳಿಸಿರುವ ಸಾಮಾಜಿಕ ಜಾಲತಾಣ ಫೇಸ್ಬುಕ್ನ್ನು ಭಾರತದಲ್ಲಿ ಪ್ರತಿದಿನ 69 ಮಿಲಿಯನ್ ಜನರು ಬಳಕೆ ಮಾಡುತ್ತಾರೆ, ಇದರಲ್ಲಿ 64 ಮಿಲಿಯನ್ ಜನ ಮೊಬೈಲ್ನಲ್ಲೇ ಫೇಸ್ಬುಕ್ ನೋಡುತ್ತಾರೆ.
ಯುಎಸ್ ಮೂಲದ ಫೇಸ್ಬುಕ್ ಸಂಸ್ಥೆಯೇ ಹೇಳಿಕೆಯಲ್ಲಿ ಈ ವಿಷಯವನ್ನು ತಿಳಿಸಿದೆ.
ಭಾರತದಲ್ಲಿ ನಾವು ತಿಂಗಳಿಗೊಮ್ಮೆ ನೋಡುವ ಒಟ್ಟು 142 ಮಿಲಿಯನ್ ಬಳಕೆದಾರರನ್ನು ಹೊಂದಿದ್ದೇವೆ, ಇದರಲ್ಲಿ 133 ಮಂದಿ ಮೊಬೈಲ್ನಲ್ಲಿ ವೀಕ್ಷಿಸುತ್ತಾರೆ ಎಂದಿದೆ.
‘ಮೂರು ಮಿಲಿಯನ್ ಉದ್ಯಮಿಗಳು ನಮ್ಮ ಸೈಟ್ನಲ್ಲಿ ಜಾಹೀರಾತು ನೀಡುತ್ತಾರೆ, ಒಂದು ವರ್ಷದಲ್ಲಿ ಇದು ಶೇ.50ರಷ್ಟು ಏರಿದೆ. ಇವರಲ್ಲಿ ಶೇ.7೦ ಮಂದಿ ಅಮೆರಿಕಾದಿಂದ ಹೊರಗಿರುವವರು’ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.