ಟೋರಂಟೋ: ಕೆನಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಭಾರತೀಯ ಸಮುದಾಯ ರಾಕ್ಸ್ಟಾರ್ ಆತಿಥ್ಯವನ್ನೇ ನೀಡಿದೆ. ಬುಧವಾರ ಟೊರೆಂಟೋದ ರಿಕೋಹ್ ಕೊಲಿಸಿಯಂನಲ್ಲಿ ಭಾರತೀಯ ಸಮುದಾಯ ಭವ್ಯ ಸಮಾರಂಭವನ್ನು ಮೋದಿಗಾಗಿ ಏರ್ಪಡಿಸಿತ್ತು.
ಇದರಲ್ಲಿ ಸುಮಾರು 10 ಸಾವಿರ ಮಂದಿ ಭಾಗವಹಿಸಿದ್ದರು, ಬಾಲಿವುಡ್ ಸಿಂಗರ್ ಸುಖ್ವಿಂದರ್ ಸಿಂಗ್, ಶಿಯಾಮಕ್ ದಾವರ್ ಟ್ರೋಪೆ ಸೇರಿದಂತೆ ಇತರ ತಂಡಗಳು ಸಮಾರಂಭದಲ್ಲಿ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಜನರನ್ನು ಸಂಭ್ರಮದಲ್ಲಿ ತೇಲಾಡಿಸಿದವು.
ಮೋದಿ, ಮೋದಿ ಎಂಬ ಉದ್ಘೋಷದ ನಡುವೆಯೂ ಹಿಂದಿಯಲ್ಲಿ ಮಾತು ಆರಂಭಿಸಿದ ಮೋದಿ ‘ಸರ್ಕಾರ ಬದಲಾಗಿಲ್ಲ, ಕಳೆದ 10 ತಿಂಗಳಿನಿಂದ ಜನರ ಮನಸ್ಸು ಬದಲಾಗಿದೆ. ಈ ಹೊಸ ವಾತಾವರಣದಲ್ಲಿ ಸ್ವಚ್ಛ ಅಭಿಯಾನ ಇರಲಿ, ಬ್ಯಾಂಕ್ ಖಾತೆ ತುಂಬುವ ಅಭಿಯಾನ ಇರಲಿ, ಗ್ಯಾಸ್ ಸಬ್ಸಿಡಿ ಇರಲಿ ಜನ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ’ ಎಂದರು.
‘ಸೆಲೆಬ್ರಿಟಿಗಳು ಕೂಡ ಸ್ವಇಚ್ಛೆಯಿಂದ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಬಡವರು 14 ಸಾವಿರ ಕೋಟಿಯನ್ನು ಬ್ಯಾಂಕಿನಲ್ಲಿ ಜಮಾವಣೆ ಮಾಡಿದ್ದಾರೆ. ಶ್ರೀಮಂತರು ಗ್ಯಾಸ್ ಸಬ್ಸಿಡಿಗಳನ್ನು ತೊರೆಯುತ್ತಿದ್ದಾರೆ. ಮೋದಿ ಏನೂ ಮಾಡಿಲ್ಲ, ಭಾರತದಲ್ಲಿನ ಸಾಮಾನ್ಯ ಜನರು ಬದಲಾವಣೆಯನ್ನು ತರುತ್ತಿದ್ದಾರೆ’ ಎಂದರು.
’ನಮ್ಮ ಧ್ಯೇಯ ಸ್ಕಿಲ್ ಇಂಡಿಯಾ, ಸ್ಕ್ಯಾಮ್ ಇಂಡಿಯಾ ಅಲ್ಲ(ಕೌಶಲ್ಯ ಭಾರತ, ಹಗರಣಗಳ ಭಾರತ ಅಲ್ಲ), ಹಿಂದಿನ ಸರ್ಕಾರಗಳು ಹಗರಣಗಳ ಮೂಲಕ ಮಾಡಿದ ಕೊಳೆಯನ್ನು ನಾವು ಸ್ವಚ್ಛಗೊಳಿಸಿದ್ದೇವೆ’ ಎಂದು ಮೋದಿ ಹೇಳಿದಾಗ ನೆರೆದಿದ್ದ ಭಾರತೀಯ ಸಮುದಾಯ ಚಪ್ಪಾಳೆಗಳ ಸುರಿಮಳೆಯನ್ನೇ ಸುರಿಸಿತು.
ಭಾರತದ ಧ್ವಜದಲ್ಲಿರುವ ಕೆಸರಿ, ಬಿಳಿ, ಹಸಿರು ಮತ್ತು ನೀಲಿ(ಅಶೋಕಚಕ್ರ) ಬಣ್ಣಗಳ ಅರ್ಥವನ್ನು ಸಾಕಾರಗೊಳಿಸಲು ನಾವು ಪಣತೊಟ್ಟಿದ್ದೇವೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.