ಜಮ್ಮು: ಭಾರತದ ಗಡಿಭಾಗವಾದ ಜಮ್ಮು ಜಿಲ್ಲೆಯ ಆರ್ಎಸ್ ಪುರ ಸೆಕ್ಟರ್ನ ನಿಕ್ಕಿ ತವಿ ನದಿ ಸಮೀಪ ಪಾಕಿಸ್ಥಾನ ಕೊರೆದಿರುವ ಸುರಂಗ ಮಾರ್ಗವನ್ನು ಬಿಎಸ್ಎಫ್ ಪಡೆ ಪತ್ತೆ ಹಚ್ಚಿದೆ.
’ಪಾಕಿಸ್ಥಾನ ತನ್ನ ಕಡೆಯಿಂದ ಭಾರತದೆಡೆಗೆ ಸುರಂಗವನ್ನು ಕೊರೆಯುತ್ತಿದೆ ಎಂಬ ಅಂಶ ನಮಗೆ ಪರಿಶೀಲನೆಯಿಂದ ತಿಳಿದು ಬಂದಿದೆ, ಜಮ್ಮುವಿಗೆ ಭಯೋತ್ಪಾದಕರನ್ನು ನುಗ್ಗಿಸುವ ಪ್ರಯತ್ನ ಇದು’ ಎಂದು ಐಜಿ ಬಿಎಸ್ಎಫ್ ಜಮ್ಮು ಫ್ರಾಂಟಿಯರ್ ರಾಕೇಶ್ ಶರ್ಮಾ ಹೇಳಿದ್ದಾರೆ.
ಬಿಎಸ್ಎಫ್ ನಿರಂತರವಾಗಿ ಪರಶೀಲನೆ ನಡೆಸುತ್ತದೆ, ಈ ವೇಳೆ ನಿನ್ನೆ ರಾತ್ರಿ ಈ ಸುರಂಗ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
2012ರ ಬಳಿಕ ಬಿಎಸ್ಎಫ್ ಪತ್ತೆ ಹಚ್ಚಿದ ನಾಲ್ಕನೇ ಸುರಂಗ ಇದಾಗಿದೆ.
ಸುರಂಗವನ್ನು ಪತ್ತೆ ಹಚ್ಚುವ ಮೂಲಕ ಭಯೋತ್ಪಾದಕರನ್ನು ಭಾರತದೊಳಕ್ಕೆ ನುಸುಳಿಸುವ ಪಾಕಿಸ್ಥಾನದ ಮಹಾ ಪ್ರಯತ್ನ ವಿಫಲಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.