ಬೈಂದೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಉಡುಪಿ ಜಿಲ್ಲಾ ಘಟಕ ಆಯೋಜಿಸಿರುವ ಎರಡು ದಿನಗಳ ಸಾಮಾಜಿಕ ಪರಿವರ್ತನೆಯ ವಿಮೋಚನಾ ಜನಜಾತ್ರೆ ರಥ ಮರವಂತೆಗೆ ಆಗಮಿಸಿದಾಗ ಗ್ರಾಮ ಪಂಚಾಯತಿಯ ಎದುರು ಸ್ವಾಗತ ಕೋರಲಾಯಿತು. ಗ್ರಾ. ಪಂ. ಅಧ್ಯಕ್ಷೆ ಕೆ. ಎ. ಸುಗುಣಾ ವಾಹನದಲ್ಲಿರಿಸಲಾಗಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಾರ್ಪಣೆಗೈದು ಗೌರವ ಸಲ್ಲಿಸಿದರು.
ಪಂಚಾಯತ್ನ ಮಾಜಿ ಅಧ್ಯಕ್ಷರಾದ ಎಂ. ವಿನಾಯಕ ರಾವ್, ನಸಿಂಹ ಶೆಟ್ಟಿ, ಎಸ್, ಜನಾರ್ದನ, ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್, ಸಿಬ್ಬಂದಿ ಗುರುರಾಜ ಬಿಲ್ಲವ, ಪ್ರಭಾಕರ, ಇತರರು ಇದ್ದರು. ಸಮಿತಿಯ ಅಧ್ಯಕ್ಷ ಉದಯ ತಲ್ಲೂರು ಅವರ ನೇತೃತ್ವದ ಈ ರಥಯಾತ್ರೆ ಸೋಮವಾರ ಕುಂದಾಪುರದಿಂದ ಹೊರಟಿದ್ದು, ಬೈಂದೂರು-ಕೊಲ್ಲೂರು-ಕಾರ್ಕಳ-ಉಡುಪಿ ಮಾರ್ಗವಾಗಿ ಮಂಗಳವಾರ ಮರಳಿ ಕುಂದಾಪುರ ತಲಪಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.