ನವದೆಹಲಿ: ಮಾ.19ರಂದು ನಡೆಯಲಿರುವ ಐಸಿಸಿ ವಿಶ್ವ20ಟೂರ್ನಿಯಾ ಭಾರತ-ಪಾಕಿಸ್ಥಾನ ಕ್ರಿಕೆಟ್ ಪಂದ್ಯಾಟಕ್ಕೆ ಧರ್ಮಶಾಲಾದ ಕ್ರಿಕೆಟ್ ಮೈದಾನವನ್ನು ನಿಗಧಿಪಡಿಸಲಾಗಿದೆ, ಆದರೆ ಇದಕ್ಕೆ ಹಿಮಾಚಲಪ್ರದೇಶ ಸರ್ಕಾರ ತಕರಾರು ತೆಗೆದಿದೆ.
ಈ ಪಂದ್ಯಾಟಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಲು ನಮಗೆ ಕಷ್ಟವಾಗುತ್ತದೆ ಎಂದು ಮುಖ್ಯಮಂತ್ರಿ ವೀರಭದ್ರ ಸಿಂಗ್ ಹೇಳಿದ್ದು, ಪಂದ್ಯದ ಸ್ಥಳವನ್ನು ಬದಲಾಯಿಸಲು ಆಗ್ರಹಿಸಿದ್ದಾರೆ.
ಸರ್ಕಾರದ ಈ ನಿರ್ಧಾರವನ್ನು ಬಿಸಿಸಿಐ ಸೆಕ್ರೆಟರಿ ಅನುರಾಗ್ ಠಾಕೂರ್ ಟೀಕಿಸಿದ್ದು, ಹಿಮಾಚಲ ಸರ್ಕಾರ ಕ್ರಿಕೆಟ್ನ್ನು ರಾಜಕೀಯಗೊಳಿಸುತ್ತಿದೆ. ಇವರು ರಾಜ್ಯ ಮತ್ತು ದೇಶದ ಇಮೇಜ್ನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಕೂಡ ಹಿಮಾಚಲ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬಹಳ ಹಿಂದೆಯೇ ಪಂದ್ಯಾಟದ ಸ್ಥಳವನ್ನು ನಿಗಧಿ ಮಾಡಲಾಗಿದೆ. ವಿಶ್ವದಾದ್ಯಂತ ಇರುವ ಅಭಿಮಾನಿಗಳು ಈಗಾಗಲೇ ಟಿಕೆಟ್ ಬುಕ್ ಮಾಡಿದ್ದಾರೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.