ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ’ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದರು. ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಈ ಬಾರಿ ಅವರು ಸಲಹೆ, ಸೂಚನೆಗಳನ್ನು ನೀಡಿದರು.
ವಿಶೇಷ ಎಂಬಂತೆ ಈ ಬಾರಿ ಅವರಿಗೆ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಮತ್ತು ಚೆಸ್ ತಾರೆ ವಿಶ್ವನಾಥನ್ ಆನಂದ್ ಸಾಥ್ ನೀಡಿದ್ದು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಿದರು.
ನಿಮ್ಮೊಂದಿಗೆ ನೀವು ಸ್ಪರ್ಧೆಗಿಳಿಯಬೇಕೇ ಹೊರತು ಬೇರೆಯವರೊಂದಿಗೆ ಅಲ್ಲ, ಪೋಷಕರು, ಶಿಕ್ಷಕರು ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಯಾವುದೇ ಒತ್ತಡ, ಕಳವಳಕ್ಕೆ ಒಳಗಾಗದೆ ಪರೀಕ್ಷೆಯ ಸಂದರ್ಭ ಮುಕ್ತರಾಗಿ, ಆತ್ಮವಿಶ್ವಾಸದಿಂದ ಇರಬೇಕು ಎಂದರು.
ಈ ವೇಳೆ ಸಂದೇಶ ನೀಡಿದ ಸಚಿನೆ ತೆಂಡೂಲ್ಕರ್, ನಿಮ್ಮ ಯೋಚನೆ ಧನಾತ್ಮಕವಾಗಿರಲಿ, ಆಗ ಧನಾತ್ಮಕ ಫಲಿತಾಂಶವೇ ಬರುತ್ತದೆ ಎಂದರು.
ಖ್ಯಾತ ವಿಜ್ಞಾನಿ ಸಿಎನ್ಆರ್ ರಾವ್ ಅವರೂ ಸಲಹೆ ನೀಡಿ, ಹಲವಾರು ಅವಕಾಶಗಳಿದ್ದು, ನಿಮಗೆ ಜೀವನದಲ್ಲಿ ಏನು ಆಗಬೇಕೆಂಬುದನ್ನು ನೀವೇ ನಿರ್ಧರಿಸಬೇಕು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.