ಒಟ್ಟಾವ: ಕೆನಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಯುರೇನಿಯಂ ಪೂರೈಕೆಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದಂತೆ ಕೆನಡಾ ದೇಶವು ಮುಂದಿನ ಐದು ವರ್ಷಗಳವರೆಗೆ ಭಾರತಕ್ಕೆ ಪರಮಾಣು ಇಂಧನ (ಯುರೇನಿಯಂ) ಪೂರೈಕೆ ಮಾಡಲಿದೆ.
ಪ್ರಧಾನಿ ಮೋದಿ ಹಾಗೂ ಕೆನಡಾ ಪ್ರಧಾನಿ ಸ್ಪೀಫನ್ ಹಾರ್ಪರ್ ಅವರು ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದ ಪ್ರಕಾರ, ಕಮೆಕೊ ಕಾರ್ಪೋರೇಷನ್ ಕಂಪೆನಿಯು ಭಾರತಕ್ಕೆ ಈ ವರ್ಷದಿಂದ ಐದು ವರ್ಷಗಳ ಅವಧಿಯಲ್ಲಿ ಸುಮಾರು ೧,೬೦೦ ಕೋಟಿ ಮೌಲ್ಯದ 3 ಸಾವಿರ ಮೆಟ್ರಿಕ್ ಟನ್ ಯುರೇನಿಯಂ ಪೂರೈಕೆ ಮಾಡಲಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೋದಿ ‘ದ್ವಿಪಕ್ಷೀಯ ಸಹಕಾರ ಹಾಗೂ ಪರಸ್ಪರ ವಿಶ್ವಾಸವೃದ್ಧಿಯಲ್ಲಿ ಇದೊಂದು ಮಹತ್ವದ ನಡೆ’ ಎಂದು ಬಣ್ಣಿಸಿದ್ದಾರೆ.
ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ (ಐಎಇಎ) ಸುರಕ್ಷತಾ ನಿಯಮಗಳ ಅಡಿ ಯುರೇನಿಯಂ ಪೂರೈಸಲಾಗುತ್ತದೆ. ರಷ್ಯಾ, ಕಜಕಸ್ತಾನದ ಬಳಿಕ ಭಾರತಕ್ಕೆ ಯುರೇನಿಯಂ ಪೂರೈಕೆ ಮಾಡಲಿರುವ ೩ನೇ ದೇಶ ಕೆನಡಾ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.