ಪುತ್ತೂರು : ಸರಕಾರದಿಂದ ಗ್ರಾ.ಪಂ.ಗೆ ಬರುವ ಅನುದಾನದಲ್ಲಿ ಬಹುಪಾಲು ವಿದ್ಯುತ್ ಬಿಲ್ಲ್ನ ಬಾಕಿ ಪಾವತಿಗಾಗಿ ಕಡಿತವಾಗುತ್ತಿದೆ.ಆದರೂ ವಿದ್ಯುತ್ ಬಿಲ್ಲು ಇದುವರೆಗೂ ಪೂರ್ಣ ಪಾವತಿಯಾಗಿಲ್ಲ ಈ ಕುರಿತು ಸಮರ್ಪಕ ಮಾಹಿತಿಯನ್ನು ಮೆಸ್ಕಾಂ ಒದಗಿಸುವಂತೆ ಒತ್ತಾಯಿಸಿದ ಘಟನೆ ಸವಣೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಸಭೆಯು ಗ್ರಾ.ಪಂ.ಅಧ್ಯಕ್ಷ ವಸಂತ ಪೂಜಾರಿ ನೇರೊಳ್ತಡ್ಕರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಅಬ್ದುಲ್ ರಝಾಕ್ ಕಳೆದ ಒಂಬತ್ತು ವರ್ಷಗಳ ಹಿಂದೆ ರೂ.7ಲಕ್ಷ ಬಾಕಿ ಇತ್ತು. ಬಳಿಕ ಅನುದಾನದಲ್ಲಿ ಕಡಿತವಾಗುತ್ತಿದ್ದರೂ ಬಾಕಿ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ ಈ ಕುರಿತು ಸಮರ್ಪಕ ಮಾಹಿತಿಯನ್ನು ಮೆಸ್ಕಾಂ ಇಲಾಖೆಯಿಂದ ಪಡೆದುಕೊಂಡು ಮಾಹಿತಿ ಪಡೆದುಕೊಳ್ಳುವಂತೆ ಒತ್ತಾಯಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ರಾಕೇಶ್ ರೈ ಕೆಡೆಂಜಿ ,ಸರಕಾರದ ಅನುದಾನದಲ್ಲಿ ವಿದ್ಯುತ್ ಬಿಲ್ಲಿಗೆ ಕಡಿತವಾಗುತ್ತಿರುವುದರಿಂದ ಅಭಿವೃದ್ದಿ ಕಾರ್ಯಕ್ಕೆ ತೊಡಕಾಗುತ್ತಿದೆ.ಇದರಿಂದ ಈ ಕುರಿತು ಸಮರ್ಪಕ ಮಾಹಿತಿ ಬೇಕಾಗಿದೆ ಎಂದರು.ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಗ್ರಾ.ಪಂ.ತೆರಿಗೆ ಸಂಗ್ರಹಣೆಯಲ್ಲಿ ಶೇ.73 ರಷ್ಟು ಪ್ರಗತಿ ಸಾಧಿಸಿದೆ ಎಂದು ಪಂ.ಅಭಿವೃದ್ದಿ ಅಧಿಕಾರಿ ಮಾಹಿತಿ ನೀಡಿದಾಗ ರಾಕೇಶ್ ರೈ ಕೆಡೆಂಜಿ,ಇದರಲ್ಲಿ ಶೇ.೯೦ರಷ್ಟು ಪ್ರಗತಿ ಸಾಧಿಸಬೇಕು.ಕಟ್ಟಡದ ಅಳತೆ ಮಾಡಿ ತೆರಿಗೆ ಸಂಗ್ರಹಣೆಯ ಕುರಿತು ವಿಶೇಷ ಸಭೆ ನಡೆಸುವ ಅವಶ್ಯಕತೆ ಇದೆ.ಕೂಡಲೇ ಸಭೆ ನಡೆಸಬೇಕು,ಚುನಾವಣೆ ಘೋಷನೆಯಾದರೆ ಎಲ್ಲ ಕಾರ್ಯಗಳು ಸ್ಥಗಿತಗೊಳ್ಳವದರಿಂದ ಶೀಘ್ರವಾಗಿ ಸಭೆ ನಡೆಸುವಂತೆ ಒತ್ತಾಯಿಸಿದರು.ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ದ ಪ್ರಗತಿಯ ಕುರಿತು ಸದಸ್ಯರು ಮಾಹಿತಿ ಕೇಳಿದರು.ಇದಕ್ಕುತ್ತರಿಸಿ ಅಭಿವೃದ್ದಿ ಅಧಿಕಾರಿ ಸುಭಾಶಚಂದ್ರ ಮಲ್ಲಣ್ಣನವರ್ ಈ ಕುರಿತು ಸರಕಾರಕ್ಕೆ ಸಂಬಂದ ಪಟ್ಟ ಕಡತವನ್ನು ನೀಡಲಾಗಿದೆ ಎಂದರು.
ಕುಡಿಯುವ ನೀರು ಬಳಕೆದಾರರ ಸಭೆ ನಡೆಸಿ,ವಿದ್ಯುತ್ ಬಿಲ್ಲು ಬಾಕಿಯಾಗದಂತೆ ಸಲಹೆ ನೀಡುವುದು ಅಲ್ಲದೆ ಕುಡಿಯುವ ನೀರಿನ ವಿವಿಧ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಸದಸ್ಯರು ಸಲಹೆ ನೀಡಿದರು.ಸಭೆ ನಡೆಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಸೊಳ್ಳೆ ಕಾಟ:ಎಸ್ಡಿಪಿಐ ಯಿಂದ ಮನವಿ : ಸಭೆ ನಡೆಯುತ್ತಿದ್ದ ಸಂಧರ್ಭದಲ್ಲಿ ಸವಣೂರು ಎಸ್ಡಿಪಿಐ ವಲಯ ಸಮಿತಿಯಿಂದ ಸವಣೂರಿನಲ್ಲಿ ವಿಪರೀತವಾಗಿ ಸೊಳ್ಳೆ ಕಾಟವಿದ್ದು ಇದರ ನಿರ್ಮೂಲನೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ಜರಗಿಸುವಂತೆ ಮನವಿ ಸಲ್ಲಿಸಲಾಯಿತು.ಈ ಸಂಧರ್ಭದಲ್ಲಿದ್ದ ಮಾತನಾಡಿದ ಎಂ.ಎ.ರಫೀಕ್ ಸೊಳ್ಳೆ ಕಾಟದ ಕುರಿತು ಗ್ರಾಮ ಸಭೇಯಲ್ಲಿ,ಮನವಿ ನೀಡಿ ಒತ್ತಾಯಿಸಲಾಗಿದೆ.ಆದರೂ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ.ಇದರಿಂದ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ತಪ್ಪಿದಲ್ಲಿ ಪಂಚಾಯತ್ ಎದುರು ಪ್ರತಿಭಟಿನೆ ನಡಸುತ್ತೇವೆ ಎಂದು ಎಚ್ಚರಿಸಿದರು.ಇದಕ್ಕೆ ಗ್ರಾ.ಪಂ.ಸದಸ್ಯರು ದ್ವನಿಗೂಡಿಸಿ ಇದು ಗಂಬೀರ ವಿಚಾರ ಇದಕ್ಕೆ ಆರೋಗ್ಯ ಇಲಾಖೆಯ ಜತೆಗೆ ಸೇರಿ ಕ್ರಮಕೈಗೊಳ್ಳಬೇಕಿದೆ ಎಂದರು.
ಸಭೆಯಲ್ಲಿ ತಾ.ಪಂ.ಸದಸ್ಯೆ ಸುಮತಿ ಸರ್ವೆ.ಗ್ರಾ.ಪಂ.ಉಪಾಧ್ಯಕ್ಷೆ ಝೌರಾಭಿ,ಸದಸ್ಯರಾದ ಕಿಟ್ಟಣ್ಣ ರೈ ನಡುಕೂಟೇಲು,ಸುದರ್ಶನ್ ಕಂಪ,ಬಾಬು ಅಟ್ಟೋಳೆ,ಸುದೀರ್ ಕುಮಾರ್ ರೈ ಕುಂಜಾಡಿ,ಸುಧಾಮ ಮಣಿಯಾಣಿ ,ಕೃಷ್ಣಪ್ಪ ಸುಣ್ಣಾಜೆ ,ಗೀತಾ ಸುಂದರ ಪೂಜಾರಿ ಮಡಕೆ,ವಿಜಯಾ ಬಾಲಕೃಷ್ಣ ಕೊಡತ್ತೋಡಿ ,ಕುಸುಮಾ,ಪ್ರಮೋದ್ ಕುಮಾರ್ ,ದಯಾನಂದ ಮಾಲೆತ್ತಾರು ಬಾಗವಹಿಸಿದ್ದರು. ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಸುಭಾಶ್ಚಂದ್ರ ಮಲ್ಲಣ್ಣನವರ್ ಸ್ವಾಗತಿಸಿ ,ಲೆಕ್ಕ ಸಹಾಯಕ ಎ.ಮನ್ಮಥ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.