ಪುತ್ತೂರು : ಸಾಂಸ್ಕೃತಿಕವಾದ ಸೊಗಡು ನವೀಕರಣಗೊಳ್ಳಬೇಕಾದರೆ ತುಳುನಾಡಿನವರು ಹೊಸ ವರ್ಷದ ಅಚರಣೆಯಾದ ವಿಷು ಹಬ್ಬವನ್ನು ಆಚರಿಸಬೇಕು. ಹಬ್ಬ ಹರಿದಿನಗಳ ಅಚರಣೆಯಿಂದ ಕೌಟುಂಬಿಕ ಸಂಬಂದಗಳು ಗಟ್ಟಿಗೊಳ್ಳುತ್ತದೆ ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಹೇಳಿದರು
ಅವರು ಎ.೧೫ ರಂದು ಸವಣೂರು ಗ್ರಾಮದ ಪರಣೆ-ತುಳಸಿಪುರದಲ್ಲಿ ಶ್ರೀದೇವಿ ಸೇವಾ ಸೇವಾ ಸಮಿತಿ ತುಳಸಿಪುರ, ಬೊಳ್ಳಿಬೊಲ್ಪು ತುಳುಕೂಟ ಸವಣೂರು, ಯುವಕ ಮಂಡಲ ಸವಣೂರು ಮತ್ತು ಶ್ರೀ ದುರ್ಗಾ ಭಜನಾ ಮಂಡಳಿ . ಶಕ್ತಿನಗರ-ಪಾದೆಬಂಬಿಲ ಇದರ ಆಶ್ರಯದಲ್ಲಿ ಜರಗಿದ ವಿಷು ಆಚರಣೆಯಲ್ಲಿ ಮಾತನಾಡಿ ಜನವರಿ ೧ರಂದು ಅಚರಿಸುವ ಹೊಸವರ್ಷ ಆಚರಣೆಗೂ, ತುಳುನಾಡಿನ ಬಿಸು ಆಚರಣೆಗೂ ಅಜಗಜಾಂತರ ವ್ಯತ್ಯಾಸ ಇದೆ, ನಾವು ನಮ್ಮ ಮಣ್ಣಿನಲ್ಲಿ ಬೆಳೆದ ಫಲಪುಷ್ಪಗಳನ್ನು ಕಾಣಿಕೆಯಾಗಿ ಇಟ್ಟು, ಭೂದೇವಿಯನ್ನು ಗೌರವಿಸುವ ಬಿಸು ಕಣಿಯಿಂದ ನಮ್ಮಲ್ಲಿ ಅತ್ಮಸ್ಥರ್ಯೆ ಹೆಚ್ಚುತ್ತದೆ ಎಂದು ಹೇಳಿದರು.
ತುಳಸಿಪುರ ಶ್ರೇಷ್ಠವಾದ ಸ್ಥಳ : ಅಧ್ಯಕ್ಷತೆ ವಹಿಸಿದ್ದ ಪಾಲ್ತಾಡಿ ಚೈತನ್ಯ ರೈತ ಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿರವರು ಮಾತನಾಡಿ ಕಳೆದ ೨೦ ವರ್ಷಗಳಿಂದ ಕಟೀಲು ಮೇಳದ ಶ್ರೀದೇವಿಯ ಯಕ್ಷಗಾನ ಯಕ್ಷಗಾನ ಬಯಲಾಟ ನಡೆಯುವ ತುಳಸೀಪರ ಶ್ರೇಷ್ಠವಾದ ಸ್ಥಳವಾಗಿದೆ, ತುಳುನಾಡಿನ ಹೊಸವರ್ಷ ಆಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಂಡ ಪದ್ಮಯ್ಯ ಗೌಡ ಮತ್ತು ಬಳಗದವರ ಕಾರ್ಯ ಪ್ರಶಂಶಿನೀಯ ಎಂದರು
ಸಂಸ್ಖೃತಿಯ ಉಳಿವು ಅಗತ್ಯ: ಮುಖ್ಯ ಅತಿಥಿಯಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಮೇಶ್ ಕೆ,ಎಂ,ಬಿ.ರವರು ಮಾತನಾಡಿ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದು ಸಂಸ್ಕೃತಿಯನ್ನು ನಾವು ಉಳಿಸುವುದು ಕರ್ತವ್ಯವಾಗಿದೆ ಎಂದರು.ಸವಣೂರು ಜೆಸಿಐ ಅಧ್ಯಕ್ಷ ಶಶಿಕುಮಾರ್ರವರು ಸಂದಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಸವಣೂರು ತುಳುಕೂಟದ ಕಾರ್ಯದರ್ಶಿ ಶ್ರೀಧರ್ ಗೌಡ ಕೊಯಕುಡೆ, ಸವಣೂರು ಯುವಕ ಮಂಡಲ ಅಧ್ಯಕ್ಷ ದಯಾನಂದ ಮೆದು, ಪಾದೆಬಂಬಿಲ ಶ್ರೀದುರ್ಗಾ ಭಜನಾ ಮಂಡಳಿ ಅಧ್ಯಕ್ಷ ಹೊನ್ನಪ್ಪ ಗೌಡ ಉಪಸ್ಥಿತರಿದ್ದರು.
ತುಳಸೀಪುರಂ ಶ್ರೀ ದೇವಿ ಸೇವಾ ಸಮಿತಿಯ ಸಂಚಾಲಕ ಬಿ.ಪದ್ಮಯ್ಯ ಗೌಡ ಪರಣೆ ಸ್ವಾಗತಿಸಿ, ಸವಣೂರು ತುಳುಕೂಟದ ಮಾಜಿ ಅಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು ವಂದಿಸಿದರು.
ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಮುಖ್ಯಗುರು ಗಿರಿಶಂಕರ್ ಸುಲಾಯರವರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ಸಿ.ಆರ್.ಪಿ.ಜಯಂತ್ ವೈ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಬಳಿಕ ವಿಷು ಆಚರಣೆಯ ಪ್ರಯುಕ್ತ ವಿಶೇಷ ಭೋಜನ ನಡೆಯಿತು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.