ಬೆಂಗಳೂರು : ರಾಜ್ಯದಲ್ಲಿ 5 ದಿನಗಳ ಕೆಲಸ ಮಾಡುವ ಕಾರ್ಯಪದ್ಧತಿಯನ್ನು ಜಾರಿಗೆ ತರಲು ಕಾರ್ಮಿಕ ಇಲಾಖೆ ಚಿಂತನೆ ನಡೆಸಿದೆ.
ಈ ಬಗ್ಗೆ ಕಾಯ್ದೆಗೆ ತಿದ್ದುಪಡಿತರಲು ಮುಂದಾಗಿದ್ದು, ಪ್ರಸಕ್ತ ಐಟಿ ಮತ್ತು ಇತರ ಕ್ಷೇತ್ರದಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಅದನ್ನು ರಾಜ್ಯದ ಇತರ ನೌಕರರಿಗೂ ಜಾರಿಗೊಳಿಸಲು ಚಿಂತಿಸಲಾಗುತ್ತಿದೆ. ಈ ಕಾಯಿದೆ ಜಾರಿಗೆ ಬಂದರೆ ಕೆಲಸ ಮಾಡುವ ಸಮಯ ಹೆಚ್ಚಾಗಲಿದೆ.
ಅಲ್ಲದೇ ಅಪಾಯಕಾರಿಯಲ್ಲದ ಕ್ಷೇತ್ರ ಮತ್ತು ಫ್ಯಾಕ್ಟರಿ ಕಾಯ್ದೆಯಿಂದ ಪ್ರತ್ಯೇಕಿಸಿ ಮಹಿಳಾ ಉದ್ಯೋಗಿಗಳಿಗೆ ರಾತ್ರಿಪಾಳಿಯಲ್ಲಿ ಕೆಲಸಮಾಡಲು ಅವಕಾಶ ಸೃಷ್ಟಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ಬೆಂಗಳೂರಿನಲ್ಲಿ ನಡೆದ ಭಾರತೀಯ ಕೈಗಾರಿಕರ ಒಕ್ಕೂಟಗಳ ವಾರ್ಷಿಕ ಮಾಹಾಸಭೆಯಲ್ಲಿ ಈ ವಿಷಯವನ್ನು ತಿಳಿಸಿದರು.
ಉದ್ಯಮಿಗಳು ಸ್ವಮೌಲ್ಯಮಾಪನ ಮಾಡಲಿದ್ದು ಅವರೇ ತಮ್ಮನ್ನ ಪರಾಮರ್ಷಿಸಿ ಪ್ರಮಾಣಪತ್ರ ನೀಡುವಂತೆ ಚಿಂತಿಸಿದ್ದು , ಇದರಿಂದ ಅಧಿಕಾರಿಗಳ ಭೇಟಿ ಪದೇ ಪದೇ ಪರಿಶೀಲನೆ ರಗಳೆ ತಪ್ಪಿದಂತಾಗುತ್ತದೆ. ಅಲ್ಲದೇ ತಂತ್ರಜ್ಞಾನದ ಬಳಕೆಗೆ ಆದ್ಯತೆಯನ್ನು ನೀಡಲು ಯೋಜನೆಯನ್ನು ರೂಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.