ನಂದನ್ ಷಾ ಗುಜರಾತಿನ ಅದ್ಭುತ ಪ್ರತಿಭೆ, ಬಾಲ್ಯದಿಂದಲೇ ತಂತ್ರಜ್ಞಾನದೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡು ಅನನ್ಯ ಸಾಧನೆಯನ್ನು ಮಾಡಿ ಹೆಸರುವಾಸಿಯಾದವನು. ಸಾಮಾಜಕ್ಕೆ ಉಪಯೋಗಕರವಾದ ತಂತ್ರಜ್ಞಾನ ಸಂಬಂಧಿತ ವಸ್ತುಗಳನ್ನು ತಯಾರಿಸುವುದು ಈತನ ಸಾಧನೆ.
ಸದ್ಯ ಇಂಜಿನಿಯರಿಂಗ್ ಫೈನಲ್ ಇಯರ್ ಓದುತ್ತಿರುವ 22 ವರ್ಷದ ನಂದನ್ ಬಳಿ 3 ವಸ್ತುಗಳ ಪೇಟೆಂಟ್ ಇದೆ. ಫೋಲ್ಡ್ ಮಾಡಬಲ್ಲ ಕೀಬೋರ್ಡ್, ಸ್ಮಾರ್ಟ್ ಲಾಕಿಂಗ್ ಡಿವೈಸ್ ಮತ್ತು ಮಾಸ್ ಸ್ಟೋರೇಜ್ ಡಿವೈಸ್ಗಾಗಿ ಈತ ಪೇಟೆಂಟ್ ಪಡೆದುಕೊಂಡಿದ್ದಾನೆ.
2014ರಲ್ಲಿ ಈತ ತನ್ನ ಉತ್ಪನ್ನಗಳಿಗೆ ಪೇಟೆಂಟ್ ಕೋರಿ ಅರ್ಜಿ ಹಾಕಿದ್ದ, ಭಾರತೀಯ ಸರ್ಕಾರದ ಪೇಟೆಂಟ್ ಕಛೇರಿ ಈತನ ಮನವಿಯನ್ನು ಪುರಸ್ಕರಿಸಿದೆ. ಈತನ ಪೇಟೆಂಟ್ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆಯ ಪೇಟೆಂಟ್ ಜರ್ನಲ್ನಲ್ಲಿ ಪ್ರಕಟಗೊಂಡಿದೆ.
’ಪೇಟೆಂಟ್ ಪಡೆಯುವ ಮೂಲಕ ನನ್ನ ಕನಸು ಸಾಕಾರಗೊಂಡಿದೆ. 4 ಉತ್ಪನ್ನಗಳನ್ನು ನಾನು ತಯಾರಿಸಿದ್ದೆ. ಆದರೆ ದುರಾದೃಷ್ಟವಶಾತ್ ರೇಪ್ ಪ್ರಿವೆಂಶನ್ ಡಿವೈಸ್ನ್ನು ನನಗೆ ಮತ್ತೆ ಅಭಿವೃದ್ಧಿಪಡಿಸಲಾಗಿಲ್ಲ, ಇದನ್ನು ಮಧ್ಯದಲ್ಲೇ ಬಿಡಬೇಕಾಯಿತು. ಈಗ ನನ್ನ ಪೇಟೆಂಟ್ ಪ್ರಕಟಗೊಂಡಿದೆ. ಅದರ ಮೇಲೆ ನನಗೆ ಬೌದ್ಧಿಕ ಹಕ್ಕಿದೆ. ಇದು ನನಗೆ ದೊಡ್ಡ ವಿಷಯ’ ಎಂದು ನಂದನ್ ಹೇಳಿಕೊಂಡಿದ್ದಾನೆ.
ಇದೀಗ ತಂತ್ರಜ್ಞಾನ ಹಕ್ಕಿಗಾಗಿ ನಂದನ್ ದೆಹಲಿ ಮೂಲಕ ಸೆಕ್ಯೂರಿಟಿ ತಯಾರಕ ಕಂಪನಿಯನ್ನು ಸಂಪರ್ಕಿಸುತ್ತಿದ್ದಾನೆ. ಆತ ಮತ್ತು ಆತನ ಸ್ನೇಹಿತ ಸೇರಿ ಸೆಕ್ಯೂರಿಟಿ ಸಿಸ್ಟಮ್ ಅಭಿವೃದ್ಧಿಪಡಿಸುವ ಕಂಪನಿಯನ್ನು ಆರಂಭಿಸುವ ಗುರಿಯನ್ನು ಹೊಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.